Wednesday, August 17, 2022

Latest Posts

ಭಾರತೀಯ ಜೈನ್ ಸಂಘಟನೆಯಿಂದ ಕೋವಿಡ್ ಮುಕ್ತ ಗ್ರಾಮ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ

ಹೊಸದಿಗಂತ ವರದಿ, ಯಾದಗಿರಿ:

ಕೊರೊನಾ ಮಹಾಮಾರಿ ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಭಾರತೀಯ ಜೈನ್ ಸಂಘಟನೆಯು ಜಿಲ್ಲಾಡಳಿತ ಜೊತೆ ಕೈ ಜೋಡಿಸಿ ಕೊರೊನಾ ಮುಕ್ತ ಗ್ರಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು,ಕೊರೊನಾ ವಿರುದ್ದ ಹೋರಾಡಲು ಇನ್ನಷ್ಟು ಆತ್ಮವಿಶ್ವಾಸ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.ಅವರು ಅಭಿಪ್ರಾಯಪಟ್ಟರು.

ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾರತೀಯ ಜೈನ್ ಸಂಘಟನೆಯ ವತಿಯಿಂದ ನಡೆದ ಕೋವಿಡ್ ಫ್ರೀ ವಿಲೇಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊರೊನಾ 2 ನೇ ಅಲೆಯ ತೀವ್ರತೆಯೂ ಮೇ ತಿಂಗಳಲ್ಲಿ ಜಾಸ್ತಿ ಇತ್ತು. ಆ ಸಂದರ್ಭದಲ್ಲಿ ಆಮ್ಲಜನಕದ ಅಭಾವವಿತ್ತು. ಇಂತಹ ಪರಿಸ್ಥಿತಿಯಲ್ಲಿ ಚಿಕ್ಕದಾದ ನಮ್ಮ ಜಿಲ್ಲೆಯಲ್ಲಿ 800 ರಿಂದ 900 ಕೊರೊನಾ ಕೇಸ್ ಗಳು ದಾಖಲಾಗುತ್ತಿದ್ದವು. ನಮ್ಮ ಜಿಲ್ಲೆಯಲ್ಲಿ ಒಟ್ಟು 8 ಲಕ್ಷದ 50 ಸಾವಿರ ಅರ್ಹ ಫಲಾನುಭವಿಗಳಿದ್ದಾರೆ. ಇದರಲ್ಲಿ ಸುಮಾರು 6 ಲಕ್ಷ ಜನರಿಗೆ ಮೊದಲನೆ ಡೋಸ್ ಲಸಿಕೆ ನೀಡಿ 60 ಶೇಕಡಾವಾರು ಗುರಿ ತಲುಪಿದ್ದೇವೆ ಎಂದರು. ಇನ್ನುಳಿದವರು ತಪ್ಪು ಕಲ್ಪನೆಗಳಿಂದ ಲಸಿಕಾಕರಣಕ್ಕೆ ಹಿಂದೇಟು ಹಾಕುತ್ತಿದ್ದಾರೆ. ನಮ್ಮಲ್ಲಿ ಪ್ರತಿ ಹಳ್ಳಿ ಗ್ರಾಮ ಪಂಚಾಯತಿಯಲ್ಲಿ ನ ಸಿಬ್ಬಂದಿಗಳೊಂದಿಗೆ ಜೈನ್ ಸಂಘಟನೆಯ ಸ್ವಯಂ ಸೇವಕರು ಕೈ ಜೋಡಿಸಿ ಜನರನ್ನು ಲಸಿಕಾಕರಣಕ್ಕೆ ಮನವೊಲಿಸಿದರೆ ಅದಕ್ಕಿಂತ ದೊಡ್ಡ ಕಾರ್ಯ ಮತ್ತೊಂದಿಲ್ಲ ಎಂದು ಜಿಲ್ಲಾಧಿಕಾರಿ ನುಡಿದರು. ಒಟ್ಟಿನಲ್ಲಿ ಯಾದಗಿರಿ ಜಿಲ್ಲೆಯು ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿಯಿಂದ ಹೊರಬರಬೇಕು ಇದಕ್ಕೆ ಭಾರತೀಯ ಜೈನ್ ಸಂಘಟನೆ ಸಹಕಾರ ನೀಡಲು ಜಿಲ್ಲಾಧಿಕಾರಿ ಕೋರಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ ವೇದಮೂರ್ತಿ, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಜೈನ್ ಸಂಘಟನೆಯ ಸಂಸ್ಥಾಪಕ ಶಾಂತಿಲಾಲ್ ಮುಥ್ಥಾ, ಬಿ.ಜೆ.ಎಸ್ ನ್ಯಾಷನಲ್ ಪ್ರೆಸಿಡೆಂಟ್ ರಾಜೇಂದ್ರ ಲುಂಕದ್, ಬಿ.ಜೆ.ಎಸ್ ಸಿಇಓ ವಿಶಾಲ್ ಫನಾಸೆ, ಬಿ.ಜೆ.ಎಸ್ ಸ್ಟೇಟ್ ಪ್ರೆಸಿಡೆಂಟ್ ಮಹಾವೀರ ಪರಿಖಾ, ಸ್ಟೇಟ್ ಸೆಕ್ರೆಟರಿ ವಿಜಯ್ ರನವಾಲ್, ಬಿ.ಜೆ.ಎಸ್ ಯಾದಗಿರಿ ಜಿಲ್ಲಾ ಸಂಚಾಲಕ ರಾಜೇಶ ಜೈನ್, ಯಾದಗಿರಿ ಜಿಲ್ಲಾಧ್ಯಕ್ಷ ಅಜಿತ್ ಜೈನ್, ಯಾದಗಿರಿ ಜಿಲ್ಲಾ ಸೆಕ್ರೆಟರಿ ದಿನೇಶ ಜೈನ್, ಯಾದಗಿರಿ ತಹಶೀಲ್ದಾರ ಚೆನ್ನಮಲ್ಲಪ್ಪ ಘಂಟಿ ಇನ್ನಿತರರು ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!