spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದುಸ್ಥಿತಿಯಲ್ಲಿ ಜಿಲ್ಲಾಧಿಕಾರಿಗಳ ಹಳೆಯ ಕಟ್ಟಡ: ಸ್ಥಿತಿಗತಿ ಪರಿಶೀಲಿಸಿದ ಡಿಸಿ ರಾಮಚಂದ್ರನ್

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………

ಹೊಸ ದಿಗಂತ ವರದಿ, ಬೀದರ್ :

ನಗರದ ಹೃದಯಭಾಗದಲ್ಲಿ ಇರುವ ಜಿಲ್ಲಾಧಿಕಾರಿಗಳ ಕಚೇರಿ ಹಳೆಯ ಕಟ್ಟಡವು ಭಾಗಶಃ ದುಸ್ಥಿತಿಯಲ್ಲಿದೆ. ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಅವರು ಗುರುವಾರ ಖುದ್ದು ತಾವೇ ಕಟ್ಟಡದ ವೀಕ್ಷಣೆ ನಡೆಸಿದರು.
ಕಟ್ಟಡದ ಸ್ಥಿತಿಗತಿಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಬಗ್ಗೆ ಸಂಬಂಧಿಸಿದ ಎಂಜಿನಿಯರಿಂಗ್ ಅವರೊಂದಿಗೆ ಚರ್ಚಿಸಿದರು.
ಕಟ್ಟಡದ ಮುಂಭಾಗ ಮತ್ತು ಪಶ್ಚಿಮಕ್ಕೆ ಇರುವ ಕಟ್ಟಡದ ಒಂದು ಭಾಗವು ಭಾಗಶಃ ಅಪಾಯಕಾರಿ ಸ್ಥಿತಿಯಲ್ಲಿವೆ. ಕಟ್ಟಡವನ್ನು
ಸ್ಥಳಾಂತರಿಸಬೇಕಾದ ಅನಿವಾರ್ಯತೆ ಇದೆ ಎಂದು ಸಂಬಂಧಿಸಿದ ಅಭಿಯಂತರರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
1975ರಲ್ಲಿ ಕಟ್ಟಡ ನಿರ್ಮಾಣ: ಈ ಕಟ್ಟಡಕ್ಕೆ ಅಂದಿನ ಉಪ ರಾಷ್ಟ್ರಪತಿ ಬಿ ಡಿ ಜತ್ತಿ ಅವರು 1975 ಅಕ್ಟೋಬರ್ 7ರಂದು ಶಂಕುಸ್ಥಾಪನೆ ನೆರವೇರಿಸಿದ್ದರು.‌‌ ಈ ಕಾರ್ಯಕ್ರಮಕ್ಕೆ ಅಂದಿನ ಮಂತ್ರಿಗಳಾದ ಎಸ್ ಎಂ ಚನ್ನಬಸಪ್ಪ ಮತ್ತು ಸುಭಾಷ್ ಅಷ್ಟೂರೆ ಅವರು ಸಾಕ್ಷಿಯಾಗಿದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss