ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮೈಸೂರು:
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೊರತುಪಡಿಸಿ, ಅವರ ಇಡೀ ಕುಟುಂಬಕ್ಕೆ ಕೊರೋನಾ ಸೋಂಕು ತಗುಲಿದೆ. ರೋಹಿಣಿ ಸಿಂಧೂರಿ ಮುಂಜಾಗ್ರತೆ ವಹಿಸಿದ ಕಾರಣ ಅವರಿಗೆ ಸೋಂಕು ಅಂಟಿಲ್ಲ, ಅದರಿಂದ ಬಚಾವ್ ಆಗಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ತಂದೆ-ತಾಯಿ, ಅತ್ತೆ-ಮಾಮ ಹಾಗೂ ಪತಿ ಎಲ್ಲರಿಗೂ ಕೊರೋನಾ ಅಂಟಿರವುದು ಪರೀಕ್ಷೆಯಿಂದ ಧೃಢಪಟ್ಟಿದ್ದು, ಎಲ್ಲರೂ ಹೋಂ ಐಸೋಲೇಷನ್ ನಲ್ಲಿದ್ದಾರೆ . ಡಿಸಿ ರೋಹಿಣಿ ಸಿಂಧೂರಿ ಕೂಡ ಕೊರೋನಾ ಪರೀಕ್ಷೆಗೆ ಒಳಪಟ್ಟಿದ್ದು ನೆಗೆಟಿವ್ ರಿಪೋರ್ಟ್ ಬಂದಿದೆ.
ಇಡೀ ಕುಟುಂಬದವರಿಗೆ ಪಾಸಿಟಿವ್ ಬಂದಿದ್ದರು ದೃತಿಗೇಡದ ಡಿಸಿ ರೋಹಿಣಿ ಸಿಂಧೂರಿ, ಸಾರ್ವಜನಿಕರಿಗೆ ಒಂದಷ್ಟು ಮುಂಜಾಗ್ರತೆಯ ವಹಿಸಲು ಸಲಹೆಗಳನ್ನು ನೀಡಿದ್ದಾರೆ.
ಕೊರೋನಾ ಸೋಂಕು ದಿನೇ, ದಿನೇ ಹೆಚ್ಚುತ್ತಿದ್ದು , ಇದು ನಿಯಂತ್ರಣಕ್ಕೆ ಬರಲು ಇನ್ನೂ ಹಲವಾರು ವಾರಗಳೇ ಬೇಕು ಎಂದನಿಸುತ್ತದೆ. ಸೋಂಕಿತರ ಸಂಖ್ಯೆ ಹೆಚ್ಚಳದಿಂದಾಗಿ, ಎಲ್ಲಿಯೂ ಆಸ್ಪತ್ರೆಗಳಲ್ಲಿ ಬೆಡ್ಗಳಾಗಲೀ, ಚಿಕಿತ್ಸೆಯಾಗಲೀ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ, ಜನರ ಅನುಕೂಲಕ್ಕಾಗಿ ಹಲವು ಆಸ್ಪತ್ರೆಗಳು ಆನ್ಲೈನ್ ಕೌನ್ಸೆಲಿಂಗ್ ಹಾಗೂ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವ ಪದ್ಧತಿಯನ್ನು ಆರಂಭಿಸಿವೆ. ನಿಮಗೆ ಕೋವಿಡ್ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿನ ಲಘು ಸೂಚನೆಗಳಿದ್ದಲ್ಲಿ, ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಬಹುದು. ಸೋಂಕು ಕಾಣಿಸಿಕೊಂಡ ಮೊದಲ 5 ದಿನ ಪ್ರಮುಖವಾದದ್ದು. ಈ ವೇಳೆ ಸೂಕ್ತ ಔಷಧವನ್ನು ನಿಯಮಿತವಾಗಿ ಸೇವಿಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಹೋಂ ಐಸೋಲೇಷನ್ನಲ್ಲಿರುವ ಕೋವಿಡ್ ಸೋಂಕಿತರು, ಸೂಚಿಸಿದ ಔಷಧಗಳನ್ನು ಆನ್ಲೈನ್ ಅಥವಾ ವೈದ್ಯರ ನೇರ ಸಲಹೆಯ ಮೇರೆಗೆ ಮಾತ್ರ ತೆಗೆದುಕೊಳ್ಳುವುದು. ಒಂದು ವೇಳೆ ಈ ಔಷಧಗಳನ್ನು ತೆಗೆದುಕೊಳ್ಳುವಾಗ ಸೋಂಕಿನ ಸೂಚನೆಗಳು ನಿಯಂತ್ರಣಕ್ಕೆ ಬರುತ್ತಿಲ್ಲ ಎಂದನಿಸಿದರೆ ಕೂಡಲೇ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
ಇವುಗಳ ಜೊತೆಗೆ ಸೋಂಕಿತರು ದಿನಕ್ಕೆ ಮೂರು ಬಾರಿ ಬಿಸಿ ನೀರಿನ ಆವಿ ತೆಗೆದುಕೊಳ್ಳುವುದು ಹಾಗೂ ಬಿಸಿ ನೀರಿಗೆ ಉಪುö್ಪ ಬೆರೆಸಿ ಗಾರ್ಗಲ್ ಮಾಡುವುದು ನೆರವಾಗುತ್ತದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸಲಹೆ ನೀಡಿದ್ದಾರೆ.