Saturday, August 13, 2022

Latest Posts

ದಟ್ಟ ಮಂಜು| ಡಿಸಿಎಂ ಅಶ್ವತ್ಥನಾರಾಯಣ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಸಾಧ್ಯವಾಗದೆ ಪರದಾಟ

ಹೊಸದಿಗಂತ ವರದಿ, ಶಿವಮೊಗ್ಗ:

ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಇಂಧನ ತುಂಬಿಸಲು ನಗರದ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗಲು ಸಾಧ್ಯವಾಗದೆ ಪರದಾಡಿದ ಪ್ರಸಂಗ ಬುಧವಾರ ಬೆಳಗ್ಗೆ ನಡೆದಿದೆ.

ಬೆಂಗಳೂರಿನಿಂದ ಕುಮಟಾಕ್ಕೆ ಹೊರಟಿದ್ದ ಹೆಲಿಕಾಪ್ಟರ್ ಗೆ ಶಿವಮೊಗ್ಗದಲ್ಲಿ ಇಂಧನ ತುಂಬಿಸಲು 15 ನಿಮಿಷ ಕಾಲಾವಕಾಶ ನೀಡಲಾಗಿತ್ತು. ಬೆಳಗ್ಗೆ 8 ಗಂಟೆ ಸುಮಾರಿಗೆ ಇಲ್ಲಿಗೆ ಬಂದ ಪೈಲೆಟ್ ಗೆ ಅಚ್ಚರಿ ಕಾದಿತ್ತು. ದಟ್ಟ ಮಂಜು ಮುಸುಕಿದ್ದರಿಂದಾಗಿ ಹೆಲಿಪ್ಯಾಡ್ ಕಾಣದೆ ನಗರ ಪ್ರದಕ್ಷಿಣೆ ಹಾಕುವಂತಾಗಿತ್ತು.

ನಗರದಲ್ಲಿ ದಟ್ಟ ಮಂಜು ಆವರಿಸಿದ್ದರಿಂದಾಗಿ ರಸ್ತೆ ಕಾಣದ ಸ್ಥಿತಿಯಿಂದಾಗಿ ಬೆಳಗ್ಗೆ 9 ಗಂಟೆವರೆಗೆ ವಾಹನ ಸವಾರರು ಪರದಾಡುವಂತಾಗಿತ್ತು. ಇಂತಹ ವಾತಾವರಣ ಹೆಲಿಕಾಪ್ಟರ್ ಲ್ಯಾಂಡ್ ಆಗಲು ನೆಲವೇ ಕಾಣದ ಸ್ಥಿತಿಯಿಂದಾಗಿ ಮೂರ್ನಾಲ್ಕು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಸುಗಮವಾಗಿ ಲ್ಯಾಂಡ್ ಮಾಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss