ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯಲ್ಲಿ ಮಾಜಿ ಸಿಎಂ ದಿ. ಎಸ್. ಎಂ. ಕೃಷ್ಣ ಅವರಿಗೆ ತಾವು ಸಂತಾಪ ಸೂಚಿಸಿ ನಿನ್ನೆ ಮಾತನಾಡುವಾಗ ವಡ್ಡ ಪದ ಬಳಸಿದ್ದರಿಂದ ಯಾರಿಗಾದರೂ ನೋವಾಗಿದ್ದಾರೆ ವಿಷಾದ ವ್ಯಕ್ತಪಡಿಸುವುದಾಗಿ ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಭೋವಿ ಸಮುದಾಯದ ಬಗ್ಗೆ ತಮಗೆ ಅಪಾರ ಗೌರವವಿದೆ. ನನ್ನನ್ನು ನಾನೇ ಟೀಕೆ ಮಾಡಿಕೊಳ್ಳುವ ಬರದಲ್ಲಿ ಆ ಪದ ಬಳಸಿದ್ದೇಯೇ ಹೊರತು ಯಾರಿಗೂ ನೋವು ಉಂಟು ಮಾಡುವ ಉದ್ದೇಶದಿಂದ ಅಲ್ಲ ಎಂದು ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿಕೆಶಿ ಬಳಸಿರೋ ಆ ಒಂದು ಪದ ಸಮುದಾಯವೊಂದರ ಭಾವನೆಗೆ ಧಕ್ಕೆ ಮಾಡುತ್ತಿದ್ದು, ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದಕ್ಕೆ ಭೋಮಿ ಸಮುದಾಯದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ , ಡಿಸಿಎಂ ಡಿಕೆ ಶಿವಕುಮಾರ್ ಭೋವಿ ಸಮುದಾಯದ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವ ಡಿಕೆ ಶಿವಕುಮಾರ್ ಹೀಗೆ ಹೇಳಿದ್ದು ಸರಿಯಲ್ಲ ಅಂತ ಕಿಡಿಕಾರಿದ್ದಾರೆ.