ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಟ-ನಿರ್ದೇಶಕ ಗುರುಪ್ರಸಾದ್ ನಿಧನಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
ಕ್ರಿಯೇಟಿವ್ ಡೈರೆಕ್ಟರ್ ಮತ್ತು ಕನಕಪುರ ಮೂಲದ ಗುರುಪ್ರಸಾದ್ ಅವರ ನಿಧನದ ಸುದ್ದಿ ತಿಳಿದು ನನಗೆ ತುಂಬಾ ದುಃಖವಾಗಿದೆ. ತಮ್ಮ ವಿಶಿಷ್ಟ ಶೈಲಿಯನ್ನು ತೆರೆ ಮತ್ತು ಕಿರುತೆರೆಗೆ ತಂದ ಗುರುಪ್ರಸಾದ್ ಅವರಿಗೆ ಶಾಂತಿ ಸಿಗಲಿ. ಮೃತರ ಕುಟುಂಬ ಹಾಗೂ ಆತ್ಮೀಯರ ನೋವು ನನಗೂ ಅರ್ಥವಾಗಿದೆ ಎಂದು ಡಿಕೆಶಿ ತಿಳಿಸಿದ್ದಾರೆ.