Wednesday, September 27, 2023

Latest Posts

CHANDRAYAAN 3| ಇಸ್ರೋ ಸಿಬ್ಬಂದಿಗೆ ಶುಭ ಕೋರಿದ ಡಿಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕೆಲವೇ ಕ್ಷಣಗಳಲ್ಲಿ ಭಾರತ ದೇಶವು ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದ್ದು, ಇಡೀ ವಿಶ್ವವೇ ಭಾರತದತ್ತ ಮುಖಮಾಡಿದೆ. ಈ ಶುಭದಿನಕ್ಕೆ ಇಸ್ರೋ ಸಿಬ್ಬಂದಿಗೆ ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಭ ಹಾರೈಸಿದ್ದಾರೆ.

ಈ ಕುರಿತು ಅವರ ಟ್ವಿಟರ್‌ ಖಾತೆಯಲ್ಲಿ, “ಭಾರತೀಯ ಬಾಹ್ಯಾಕಾಶ ಪರಿಶೋಧನಾ ಪ್ರಯಾಣಕ್ಕೆ ಇಂದು ದೊಡ್ಡ ದಿನ. Chandrayaan 3 ಉಡಾವಣೆಗೆ ಇಸ್ರೋ ಸಜ್ಜಾಗಿದೆ. ಭಾರತ ದೇಶವು ಚಂದ್ರನತ್ತ ಅದ್ಭುತವಾದ ಹೆಜ್ಜೆಯನ್ನು ಇಡುತ್ತಿದೆ. ಇದಕ್ಕಾಗಿ ಹಗಲಿರುಳು ಶ್ರಮಿಸಿದ ಇಸ್ರೋದ (ISRO) ಎಲ್ಲ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಹಾಯಕ ಸಿಬ್ಬಂದಿಗೆ ನನ್ನ ಶುಭಾಶಯಗಳು” ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!