ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿಗೆ ಅತ್ಯಾಚಾರದ ಬೆದರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ‘ ನಿನ್ನ ಮೇಲೆ ಅತ್ಯಾಚಾರ ಮಾಡುತ್ತೇವೆ’ ಎಂದು ಬೆದರಿಕೆ ಸಂದೇಶ ಬರುತ್ತಿದೆ. ಅದಕ್ಕೆ ಕಾರಣ ಇತ್ತೀಚೆಗೆ ಸ್ವಾತಿ ಅವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರಿಗೆ ಪತ್ರ ಬರೆದು ‘ಮೀಟೂ’ ಕಾನೂನು ಸಮರದ ಸಂದರ್ಭದಲ್ಲಿ ಕೆಲವು ಮಹಿಳೆಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದರು.

2018 ರಲ್ಲಿ ಸಾಜಿದ್ ಖಾನ್ ಅವರನ್ನು ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಿರ್ದೇಶಕರ ಸಂಘದಿಂದ ಒಂದು ವರ್ಷ ಅಮಾನತುಗೊಳಿಸಲಾಗಿತ್ತು ಎಂದು ಸ್ವಾತಿ ನೆನಪಿಸಿಕೊಂಡಿದ್ದಾರೆ. ಜೊತೆಗೆ ‘ಹೌಸ್‌ಫುಲ್ 4’ ಚಿತ್ರದ ನಿರ್ದೇಶಕ ಸ್ಥಾನದಿಂದ ಹಿಂದೆ ಸರಿದ ಅವರನ್ನು ಇದೀಗ ಬಿಗ್ ಬಾಸ್ ಶೋನಲ್ಲಿ ಖಾನ್ ಗೆ ಸ್ಥಾನ ನೀಡುವುದು ಸರಿನಾ? ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ. ಹೀಗಾಗಿ ಈ ರೀತಿಯ ಬೆದರಿಕೆ ಸಂದೇಶಗಳು ಬರುತ್ತಿವೆ ಎಂದಿದ್ದಾರೆ.

ಈ ಕುರಿತು ಸ್ವಾತಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಜೊತೆಗೆ ಟ್ವಿಟ್ಟರ್ ನಲ್ಲಿ ತನ್ನ ಮೇಲೆ ಅತ್ಯಾಚಾರ ಬೆದರಿಕೆ ಹಾಕುವವರನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದರು. ಕೇಂದ್ರ ಸಚಿವರಿಗೆ ಸಾಜಿದ್ ಖಾನ್ ವಿರುದ್ಧ ದೂರು ನೀಡಿದಂದಿನಿಂದ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೆದರಿಕೆಗಳು ಬರುತ್ತಿವೆ ಎಂದಿದ್ದಾರೆ.

ಸಾಜಿದ್ ಖಾನ್ ಪ್ರಕರಣವನ್ನು ಮುಂದುವರಿಸುವುದನ್ನು ತಡೆಯಲು ಈ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಕುರಿತು ದೆಹಲಿ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ. #MeToo ನಲ್ಲಿ ಸುಮಾರು 10 ಹುಡುಗಿಯರು ಸಾಜಿದ್ ಖಾನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ ಎಂದು ಸ್ವಾತಿ ಮಾಧ್ಯಮಗಳಿಗೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!