ನಾಪೋಕ್ಲು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ಹೊಸದಿಗಂತ ವರದಿ, ನಾಪೋಕ್ಲು:

ಇಲ್ಲಿನ‌ ಬೇತು ಗ್ರಾಮದ ಮುಂಡಂಡ ಪೊನ್ನಪ್ಪ ಎಂಬವರ ಕಾಫಿ ತೋಟದ ಬದಿಯಲ್ಲಿ ಅಪರಿಚಿತ ಪುರುಷನ ಮೃತ ದೇಹ ಪತ್ತೆಯಾಗಿದೆ.
ಸುಮಾರು 30ವರ್ಷ ಪ್ರಾಯದ ಈ ವ್ಯಕ್ತಿ ತಲೆ ಕೂದಲು ಬೊಳಿಸಿದ್ದು, ನೀಲಿ ಬಣ್ಣದ ಪ್ಯಾಂಟ್ ಮತ್ತು ಗೆರೆ ಇರುವ ನೀಲಿ ಬಣ್ಣದ ಶರ್ಟ್, ನೀಲಿ ಬಣ್ಣದ ಒಳ ಬನಿಯನ್ ಧರಿಸಿದ್ದು, ಪಕ್ಕದಲ್ಲೇ ಒಂದು ಬ್ಯಾಗ್ ಕೂಡಾ ಇದೆ.
ಸ್ಥಳಕ್ಕೆ ನಾಪೋಕ್ಲು ಠಾಣಾಧಿಕಾರಿ ಸದಾಶಿವ ಅವರು ಸಿಬ್ಬಂದಿಗಳೊಂದಿಗೆ ಭೇಟಿ ನೀಡಿದ್ದಾರೆ. ಮೃತ ವ್ಯಕ್ತಿಯ ಬಗ್ಗೆ ತಿಳಿದು ಬಂದಲ್ಲಿ ನಾಪೋಕ್ಲು ಪೊಲೀಸ್ ಠಾಣೆ ನಂ. 08272 237240ನ್ನು ಸಂಪರ್ಕಿಸುವಂತೆ ಕೋರಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!