ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಪ್ರೀತಿಯ ಪ್ರಯಾಣ ಶುರು ಮಾಡಿದ ಪ್ರತಿ ಜೋಡಿ ಹಕ್ಕಿಯೂ ಅಂಗೈ ಬೆಸೆದು ಬಯಸುವುದು ಇದ್ದನ್ನೇ. “ ಏಳು ಜನ್ಮಕೂ ಇವಳೇ/ ಇವನೇ ನನ್ನ ಬಾಳ ಸಂಗಾತಿಯಾಬೇಕು. ಸಾವಿನಲ್ಲೂ ಇಬ್ಬರೂ ಜೊತೆಯಾಗಬೇಕು” ಎಂದು. ಆದರೆ ಕೆಲವೇ ಕೆಲವರ ಬಯಕೆಗೆ ಮಾತ್ರ ವರ ಸಿಗುತ್ತದೆ.
ಇದೀಗ ಇದೇ ಸಾಲಿಗೆ ಹೊಸೂರು ಶಾಸಕ ವೈ. ಪ್ರಕಾಶ್ ಪುತ್ರ ಕರುಣಾ ಸಾಗರ್ ಹಾಗೂ ಆತನ ಗೆಳತಿ ಬಿಂದು ಕೂಡ ಸೇರಿದ್ದಾರೆ. ಸಪ್ತಪದಿ ತುಳಿಯುವ ಮೊದಲೇ ಸಾವಿನ ಮನೆ ಸೇರಿದ್ದಾರೆ.
ಹೌದು.. ಮಂಗಳವಾರ ಬೆಳಗಿನಜಾವ ಬೆಂಗಳೂರಿನ ಕೋರಮಂಗಲದ ಬಳಿ ನಡೆದ ಭೀಕರ ಅಫಘಾತದಲ್ಲಿ ಪ್ರೇಮಿಗಳು ಮೃತಪಟ್ಟಿದ್ದಾರೆ.
ಕರುಣಾ ಸಾಗರ್ ಇಂಗ್ಲೆಂಡ್ನಲ್ಲಿ ವ್ಯಾಸಂಗ ಮಾಡಿದ್ದು, 5 ವರ್ಷದ ಹಿಂದೆ ಭಾರತಕ್ಕೆ ಮರಳಿದ್ದ. ಹೊಸೂರು ಸಮೀಪದ ಬ್ಯಾಳಗೊಂಡನಹಳ್ಳಿಯಲ್ಲಿ ಕರುಣಾ ಸಾಗರ್ ಕಂಪನಿ ನಡೆಸುತ್ತಿದ್ದ. ಆ ವೇಳೆ ಬಿಂದು ಎಂಬುವವರನ್ನು ಪ್ರೀತಿ ಮಾಡಿದ್ದ.
ಕರುಣಾ ಸಾಗರ್ ಪ್ರೀತಿ ವಿಚಾರವನ್ನು ಮನೆಯಯೂ ಹೇಳಿದ್ದು, ಇಬ್ಬರ ಮದುವೆ ಮಾಡಲು ಕುಟುಂಬಸ್ಥರು ನಿಶ್ಚಯಿಸಿದ್ದರು.
ಕಟ್ಟಡ ಸಾಮಾಗ್ರಿ ಖರೀದಿಸುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಕರುಣಾ ಸಾಗರ್ ಬಿಂದು ಇದ್ದ ಪಿಜಿಗೆ ಹೋಗಿ ಆಕೆಯನ್ನು ಕರೆದುಕೊಂಡು ಹೋಗಿದ್ದಾನೆ. ತನ್ನ ಸ್ನೇಹಿತೆಯರ ಜತೆ ಬಿಂದು ಕೂಡ ಬಂದಿದ್ದಾರೆ.
ಇವರೆಲ್ಲರೂ ಜತೆಗೂಡಿ ರಾತ್ರಿ ಹೊರ ಹೋಗಿದ್ದಾರೆ. ಪಾರ್ಟಿ ಮಾಡಿದ ಬಳಿಕ ವಾಪಸು ಕೋರಮಂಗಲಕ್ಕೆ ಬರುವಾಗ ಈ ಅವಘಡ ಸಂಭವಿಸಿದೆ. 7 ಜನರು ಮೃತಪಟ್ಟಿದ್ದಾರೆ.
ಕೋರಮಂಗಲ ಪೊಲೀಸ್ ಠಾಣೆ ಸಮೀಪದ ಪಿಜಿಯಲ್ಲಿ ಬಿಂದು ಸೇರಿ ಐವರು ವಾಸವಾಗಿದ್ದರು. ಪಿಜಿ ಮಾಲೀಕರಿಗೆ ಎಲ್ಲಿ ಕೆಲಸ ಮಾಡುತ್ತಿದ್ದೀವಿ ಎಂಬುದರ ವಿವರಗಳನ್ನು ಅವರು ನೀಡಿರಲಿಲ್ಲ. ಪಿಜಿ ಮಾಲೀಕರನ್ನು ಸಂಪರ್ಕಿಸಿದ ಪೊಲೀಸರು ಮೃತ ಮೂವರು ಯುವತಿಯರು ನೀಡಿರುವ ಪೋನ್ ನಂಬರ್ ಪಡೆದು ಪೋಷಕರ ಪತ್ತೆಗೆ ಮುಂದಾಗಿದ್ದಾರೆ.