Friday, August 12, 2022

Latest Posts

ಮಹಾನ್ ಗಾಯಕ ಎಸ್‌ಪಿಬಿ ನಮ್ಮನ್ನಗಲಿ ಇಂದಿಗೆ ಒಂದು ವರ್ಷ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಸಂಗೀತ ಲೋಕದ ದಿಗ್ಗಜ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ವರ್ಷವಾಗಿದೆ.
ಕಳೆದ ವರ್ಷ ಇದೇ ದಿನದಂದು ಎಸ್.ಪಿ.ಬಿ ಅಭಿಮಾನಿಗಳು ಅವರು ಮತ್ತೆ ಗುಣಮುಖರಾಗಿ ಆಸ್ಪತ್ರೆಯಿಂದ ಹೊರಬರಲಿ ಎಂದು ಕಣ್ಣೀರಿಟ್ಟಿದ್ದರು.
ಅಷ್ಟೆಲ್ಲಾ ಪ್ರಾರ್ಥನೆ, ಅಭಿಷೇಕ, ವಿಶೇಷ ಪೂಜೆಗಳು ಫಲಿಸಲೇ ಇಲ್ಲ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಸ್‌ಪಿಬಿ ಅವರು ಕೊನೆಯುಸಿರೆಳೆದರು.
ಆದರೆ ಎಸ್.ಪಿ.ಬಿ ಇಂದಿಗೂ ನಮ್ಮೊಂದಿಗೇ ಇದ್ದಾರೆ. ಗಾಯಕನಿಗೆ ಎಂದಿಗೂ ಸಾವಿಲ್ಲ, ವರ್ಷಗಳ ಕಾಲ ಅವರ ಹಾಡುಗಳನ್ನು ಕೇಳುತ್ತಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೇಳಿಕೊಳ್ಳಬಹುದು.
ಎಸ್.ಪಿ.ಬಿ ಅವರ ಪುಣ್ಯತಿಥಿಯಂದು ಸಿನಿ ಲೋಕದ ದಿಗ್ಗಜರು ಅವರನ್ನು ನೆನೆಸಿ ಕಣ್ಣೀರಿಟ್ಟಿದ್ದಾರೆ.
ಅವರಿಷ್ಟದ ಎಸ್.ಪಿ.ಬಿ ಅವರ ಕಂಠದಲ್ಲಿ ಮೂಡಿಬಂದ ಹಾಡುಗಳನ್ನು, ಹಾಡುತ್ತಾ, ಕೇಳುತ್ತಾ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಸ್.ಪಿ.ಬಿ ಪರಂಪರೆ ಸದಾ ಮುಂದುವರಿಯಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss