ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅನಾರೋಗ್ಯದಿಂದ ಬಳಲುತ್ತಿದ್ದ ಯುವಕ ಅಂಬುಲೆನ್ಸ್‌ಗಾಗಿ ಕಾದು, ನಡು ರಸ್ತೆಯಲ್ಲಿಯೇ ಸಾವು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸ ದಿಗಂತ ವರದಿ, ಮಡಿಕೇರಿ:

ಕಳೆದ ಎರಡು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನೋರ್ವ ಆಸ್ಪತ್ರೆಯ ಅಂಬುಲೆನ್ಸ್‌ಗಾಗಿ ಕಾದು ನಡು ರಸ್ತೆಯಲ್ಲೆ ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಬಜೆಗುಂಡಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಮನು(23) ಎಂದು ಗುರುತಿಸಲಾಗಿದ್ದು, ಈತ ಬಜೆಗುಂಡಿ ಗ್ರಾಮದ ನಿವಾಸಿ. ಎರಡು ಮೂರು ದಿನಗಳಿಂದ ಶೀತ ಜ್ವರದಿಂದ ಬಳಲುತ್ತಿದ್ದ ಮನು ಮಂಗಳವಾರ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಕೊಟ್ಟು ಮನೆಗೆ ತೆರಳಿದ್ದಾನೆ. ಬುಧವಾರ ಜ್ವರದಿಂದ ಬಳಲಿ ನಿತ್ರಾಣಗೊಂಡು ಮಧ್ಯಾಹ್ನ 12.30ಕ್ಕೆ ಆಂಬ್ಯುಲೆನ್ಸ್ ಗೆ ಕರೆ ಮಾಡಿದ್ದಾನೆ. ನಂತರ ಬಜೆ ಗುಂಡಿ ಗ್ರಾಮದ ರಸ್ತೆಯ ಪಕ್ಕಕ್ಕೆ ಬಂದು ಬಿದ್ದಿದ್ದಾರೆ. ಆಂಬ್ಯುಲೆನ್ಸ್ ಬರುವ ತನಕ ರಸ್ತೆಯಲ್ಲೇ ಬಿದ್ದು ನರಳಿದ್ದಾರೆ. ಸತತವಾಗಿ ಗಂಟೆಗಟ್ಟಲೇ ಕಾದರೂ ಸ್ಥಳಕ್ಕೆ ಆಂಬ್ಯುಲೆನ್ಸ್ ಬಂದಿರಲ್ಲಿಲ್ಲ. ಹಲವಾರು ಬಾರಿ ಅಸ್ಪತ್ರೆಗೆ ಕರೆ ಮಾಡುವ ವೇಳೆಯಲ್ಲಿ ಈಗ ಬರುವುದು ಮತ್ತೆ ಬರುವುದಾಗಿ ತಿಳಿಸಿದರೂ ಮೂರು ಗಂಟೆ ತಡವಾಗಿ ಆಂಬ್ಯುಲೆನ್ಸ್ ಬಂದಿದೆ.ಮಗ ಬಿದ್ದಿದ್ದ ಸ್ಥಳಕ್ಕೆ ತಾಯಿ ಗೌರಿ, ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಸಿಬ್ಬಂದಿ ಬಂದು ಆತನನ್ನು ಅಂಬುಲೆನ್ಸ್ ಒಳಗೆ ಮಲಗಿಸಿದ್ದಾರೆ. ಆದರೆ ಅನಾರೋಗ್ಯದಿಂದ ಬಳಲಿದ್ದ ಯುವಕ ದಾರಿ ಮಧ್ಯೆ ಮೃತಪಟ್ಟಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss