ಹೊಸದಿಗಂತ ವರದಿ, ಅಂಕೋಲಾ:
ಗಂಗಾವಳಿ ನದಿಯಲ್ಲಿ ಕಾಲು ಜಾರಿ ಬಿದ್ದು ಯುವಕನೋರ್ವ ಮೃತ ಪಟ್ಟ ಘಟನೆ ತಾಲೂಕಿನ ಡೋಂಗ್ರಿಯಲ್ಲಿ ಸಂಭವಿಸಿದೆ.
ಡೋಂಗ್ರಿ ಗ್ರಾಮದ ಸುಶಾಂತ ಪ್ರಕಾಶ ನಾಯ್ಕ (22) ಮೃತ ವ್ಯಕ್ತಿಯಾಗಿದ್ದು ಕುಂಬಾರಕೇರಿ ಮೂಲದವರಾದ ಇವರ ಕುಟುಂಬ ಡೋಂಗ್ರಿಯಲ್ಲಿ ಕೃಷಿ ಕಾರ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ನದಿಗೆ ಆಕಸ್ಮಿಕವಾಗಿ ಬಿದ್ದ ಗಂಭೀರ ಪರಿಸ್ಥಿತಿಯಲ್ಲಿದ್ದ ಯುವಕ ಅಂಕೋಲಾದ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.