Saturday, July 2, 2022

Latest Posts

ಬಾಲಕರ ಪ್ರಾಣ ಉಳಿಸಲು ಹೋದ ಐವರ ದಾರುಣ ಸಾವು: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಾಲಕರಿಬ್ಬರ ಪ್ರಾಣ ಉಳಿಸಲು ಹೋಗಿ ಐದು ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.

ಘಟನೆಯ ವಿವರ:

ಧಾರಾಕಾರ ಮಳೆಯಾಗುತ್ತಿದ್ದು, ಅಂಗಡಿವೊಂದರ ಮುಂದಿನ ಶೆಡ್​ನ ಕಂಬವೊಂದರಲ್ಲಿ ವಿದ್ಯುತ್​ ಪ್ರವಹಿಸಿದೆ. ಇದೇ ಸಂದರ್ಭದಲ್ಲಿ ಅಂಗಡಿಗೆ ಹೋಗಿದ್ದ ಬಾಲಕರಿಬ್ಬರು ವಿದ್ಯತ್ ಕಂಬವನ್ನು ಮುಟ್ಟಿದ್ದಾರೆ. ಅದರಲ್ಲಿ ವಿದ್ಯುತ್ ಹರಿಯುತ್ತಿದ್ದರಿಂದ ಸ್ಥಳದಲ್ಲಿಯೇ ಇಬ್ಬರ ಪ್ರಾಣ ಪಕ್ಷಿ ಹಾರಿಹೋಗಿದೆ.

ಕಂಬದಲ್ಲಿ ವಿದ್ಯುತ್ ಹರಿಯುತ್ತಿರುವುದನ್ನು ಅರಿಯದ ಬಾಲಕನೊಬ್ಬ ಅವರ ರಕ್ಷಣೆಗೆ ಮುಂದಾಗಿದ್ದಾನೆ. ಅವನಿಗೂ ವಿದ್ಯುತ್ ತಗುಲಿದ್ದು, ಆತ ಕೂಡ ಮೃತಪಟ್ಟಿದ್ದಾನೆ.

ಇಷ್ಟಾದರೂ ಕೂಡ ವಿದ್ಯತ್ ಪ್ರಹರಿಸುತ್ತಿದೆ ಎಂಬುದು ತಿಳಿಯದೇ ಅವರ ರಕ್ಷಣೆಗೆ ಓರ್ವ ಮಹಿಳೆ ಮತ್ತಿಬ್ಬರು ಧಾವಿಸಿದ್ದು, ಅವರು ಕೂಡ ಮೃತಪಟ್ಟಿದ್ದಾರೆ.

ಒಟ್ಟಾರೆ ಬಾಲಕರನ್ನು ರಕ್ಷಿಸಲು ಹೋಗಿ ಐದು ಜನ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಮೂವರು ಮಕ್ಕಳಾಗಿದ್ದು, ಇಬ್ಬರು ಒಂದೇ ಕುಟುಂಬದವರು ಎನ್ನಲಾಗಿದೆ.  ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss