ಹೊಸದಿಗಂತ ವರದಿ ಹಾವೇರಿ:
ಬಾಲಿವುಡ್ ನಟ ಸಲ್ಮಾನ್‌ಖಾನ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ, ರಾಜಸ್ಥಾನ ಮೂಲದ ಬಿಕಾರಾಮ್‌ನನ್ನು ಹಾವೇರಿ ನಗರದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಬಿಕಾರಾಮ್ ಕೂಲಿ ಕೆಲಸಕ್ಕೆಂದು ಇತ್ತೀಚೆಗಷ್ಟೇ ಅಂದರೆ ಸುಮಾರು ಒಂದೂವರೆ ತಿಂಗಳ ಹಿಂದೆ ಹಾವೇರಿ ನಗರಕ್ಕೆ ಬಂದಿದ್ದ ಎನ್ನಲಾಗಿದೆ. ಇಲ್ಲಿ ನಗರದ ಗೌಡರ ಓಣಿಯಲ್ಲಿ ಕೂಲಿಕಾರರೊಂದಿಗೆ ರೂಮ್ ಮಾಡಿಕೊಂಡಿದ್ದು, ಕಬ್ಬಿಣದ ಗ್ರಿಲ್ ಕೆಲಸ ಮಾಡಿಕೊಂಡು ಕೂಲಿಕಾರರಂತೆ ವಾಸವಾಗಿದ್ದನು.
ಮುಂಬೈ ಪೊಲೀಸರ ಮಾಹಿತಿ ಮೇರೆಗೆ ಆರೋಪಿಯನ್ನು ಜಿಲ್ಲಾ ಪೊಲೀಸರು ವಶಕ್ಕೆ ಪಡೆದು ಮುಂಬೈ ಪೊಲೀಸರ ವಶಕ್ಕೆ ನೀಡಿದ್ದಾರೆ. ಈ ಮೊದಲು ಬೇರೆ ಕಡೆ ಕೆಲಸ ಮಾಡಿಕೊಂಡಿದ್ದ ಈತ ಈಗ ಒಂದೂವರೆ ತಿಂಗಳ ಹಿಂದೆ ಹಾವೇರಿ ನಗರಕ್ಕೆ ಬಂದು ರಾಜಸ್ಥಾನದಿಂದ ಬಂದು ಇಲ್ಲಿ ಕೂಲಿ ಕೆಲಸ ಮಾಡುತ್ತಿದ್ದವರೊಂದಿಗೆ ಸೇರಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.