ಮತ್ತೊಮ್ಮೆ ಭೂಕುಸಿತ: ಟರ್ಕಿ-ಸಿರಿಯಾದಲ್ಲಿ ಹೆಣಗಳ ರಾಶಿ, ಸಾವಿನ ಸಂಖ್ಯೆ 4,500ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಟರ್ಕಿ ಮತ್ತು ಸಿರಿಯಾ ಉಭಯ ದೇಶಗಳ ಗಡಿಯಲ್ಲಿ ಸಂಭವಿಸಿದ ಭೂಕಂಪನದಿಂದ ಎರಡೂ ದೇಶಗಲ್ಲಿ ಕಟ್ಟಡದ ಶಿಥಿಲಗಳು ಮಾತ್ರ ಕಾಣುತ್ತಿವೆ. ಭೂಕಂಪದ ತೀವ್ರತೆಗೆ ಸಾವಿರಾರು ಕಟ್ಟಡಗಳು ನಾಶವಾಗಿವೆ. ಅನೇಕ ನಗರಗಳು ಮರುಭೂಮಿಗಳಂತೆ ಕಾಣುತ್ತಿವೆ. ಭೂಕಂಪಕ್ಕೆ ಎರಡೂ ದೇಶಗಳಲ್ಲಿ ಸಾವಿನ ಸಂಖ್ಯೆ 4,500 ಗಡಿ ದಾಟಿದೆ.

ಟರ್ಕಿಯಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 16 ಸಾವಿರ ಜನರು ಗಾಯಗೊಂಡಿದ್ದಾರೆ. ಸಿರಿಯಾದಲ್ಲಿ 1500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಜನರು ತಮ್ಮ ಜೀವವನ್ನು ಅಂಗೈಯಲ್ಲಿ ಇಟ್ಟುಕೊಂಡಿದ್ದಾರೆ. ಟರ್ಕಿ ಮತ್ತು ಸಿರಿಯಾದಲ್ಲಿ ಎಲ್ಲೆಂದರಲ್ಲಿ ಕುಸಿದ ಕಟ್ಟಡಗಳು ಕಂಡುಬರುತ್ತಿವೆ. ಎರಡೂ ದೇಶಗಳ ಪ್ರದೇಶಗಳು ಶವಗಳ ರಾಶಿಯಾಗಿ ಮಾರ್ಪಟ್ಟಿವೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

ಅವಶೇಷಗಳಿಂದ ಕೆಲವು ಮೃತ ದೇಹಗಳನ್ನು ತೆಗೆಯಲಾಗುತ್ತಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, 10,000 ದಾಟಬಹುದು ಎಂದು ಯುಎನ್ ಜಿಯೋಲಾಜಿಕಲ್ ಸರ್ವೆ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!