ಕೀನ್ಯಾದಲ್ಲಿ ನದಿಗೆ ಉರುಳಿದ ಬಸ್:‌ 30 ಪ್ರಯಾಣಿಕರು ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಕೇಂದ್ರ ಕೀನ್ಯಾದ ನೈರೋಬಿ ನಗರದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 30 ಕ್ಕೆ ಏರಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಸ್ ಮೇರು ಪ್ರದೇಶದಿಂದ ರಾಜಧಾನಿ ನೈರೋಬಿಗೆ ಜನರನ್ನು ಕರೆದೊಯ್ಯುತ್ತಿತ್ತು. ಇದರಲ್ಲಿ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ತುಂಬಿಸಿಕೊಳ್ಳಲಾಗಿತ್ತು. ನೈರೋಬಿ ಸೇತುವೆಯೊಂದರ ಮೇಲೆ ಬರುತ್ತಿರುವಾಗ  ನಿಯಂತ್ರಣ ತಪ್ಪಿ ನದಿಗೆ ಉರುಳಿದೆ.
ಬ್ರೇಕ್ ವೈಫಲ್ಯದಿಂದ ಬಸ್ ನಿಯಂತ್ರಣ ತಪ್ಪಿರುವ ಶಂಕೆಯಿದೆ, ಅಪಘಾತ ಸಂಭವಿಸಿದಾಗ ಬಸ್ ಅತಿ ವೇಗದಲ್ಲಿತ್ತು” ಎಂದು ಹಿರಿಯ ಪೊಲೀಸ್ ಅಧಿಕಾರಿ ರೊನೊ ಬುನೆಯ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!