ಭೀಕರ ಚಂಡಮಾರುತಕ್ಕೆ ಫಿಲಿಪೈನ್ಸ್‌ ತತ್ತರ; ಭೂ ಕುಸಿತದಡಿ ಸಿಲುಕಿ 58 ಜನರ ದುರ್ಮರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭೀಕರ ಪ್ರಾಕೃತಿಕ ವಿಕೋಪದಿಂದ ಫಿಲಿಪೈನ್ಸ್‌ ದ್ವೀಪಸಮೂಹವು ತತ್ತರಿಸಿ ಹೋಗುತ್ತಿದೆ. ಮಳೆ- ಭೂಕುಸಿತ ಮತ್ತು ಪ್ರವಾಹದಿಂದಾಗಿ ಈ ವರೆಗೆ 58 ಜನರು ಸಾವನ್ನಪ್ಪಿದ್ದಾರೆ.
ಫಿಲಿಪೈನ್ಸ್‌ಗೆ ಅಪ್ಪಳಿಸಿರುವ ಉಷ್ಣವಲಯದ ಚಂಡಮಾರುತವಾದ ಮೇಗಿಯು ಭಯಾನಕ ಅವಘಡಗಳನ್ನು ಸೃಷ್ಟಿ ಮಾಡುತ್ತಿದೆ. 85 ಕಿಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತದ ಪ್ರಭಾವದಿಂದಾಗಿ ಭಾರೀ ಮಳೆಯೊಂದಿಗೆ ತೀವ್ರಗತಿಯಲ್ಲಿ ಭೂಕುಸಿತ ಸಂಭವಿಸುತ್ತಿದ್ದು, ಅದು ಪ್ರವಾಹ ರೂಪದಲ್ಲಿ ಮುಂದುವರೆದು ಹಳ್ಳಿಹಳ್ಳಿಗಳು ಮಣ್ಣಿನಡಿ ಮುಚ್ಚಿಹೋಗುತ್ತಿವೆ. ರಕ್ಷಣಾ ಪಡೆಗಳು ಜನರ ರಕ್ಷಣಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿವೆ. ದೊಡ್ಡದೊಡ್ಡ ಬೆಟ್ಟ ಗುಡ್ಡಗಳು ಕುಸಿಯುವ ಜೊತೆಗೆ ಚಂಡಮಾರುತದ ರಭಸಕ್ಕೆ ಮಣ್ಣು-ಕಲ್ಲುಗಳು ತೂರಿಬಂದು ಎಲ್ಲೆಡೆ ಅಪ್ಪಳಿಸುತ್ತಿವೆ.
ಬೇಬೇ ಸಿಟಿಯೊಂದರಲ್ಲೇ ಕುಸಿದ ಮಣ್ಣಿನಡಿ ಸಿಲುಕಿ 47 ಜನರು ಸಾವನ್ನಪ್ಪಿದ್ದಾರೆ ಮತ್ತು 27 ಮಂದಿ ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ 100 ಜನರು ಗಾಯಗೊಂಡಿದ್ದಾರೆ.
ಲೇಯ್ಟ್‌ನಲ್ಲಿರುವ ಪಿಲಾರ್ ಗ್ರಾಮದಲ್ಲಿ ಭೂಕುಸಿತವು ಹೆಚ್ಚಿನ ಹಾನಿ ಮಾಡಿದ್ದು, ಹಲವು ಮನೆಗಳು ಮನೆಗಳನ್ನು ಸಮುದ್ರಕ್ಕೆ ಕೊಚ್ಚಿ ಹೋಗಿವೆ. ಅಲ್ಲಿನ ಕರಾವಳಿ ಪ್ರದೇಶದಿಂದ ಸುಮಾರು 400 ಜನರನ್ನು ರಕ್ಷಣಾ ಪಡೆಗಳು ದೋಣಿ ಮೂಲಕ ರಕ್ಷಿಸುವ ಕಾರ್ಯದಲ್ಲಿ ತೊಡಗಿವೆ. ಇನ್ನೂ ಹಲವಾರು ನಗರಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!