ಹೊಸದಿಗಂತ ಡಿಜಿಟಲ್ ಡೆಸ್ಕ್
ಇತ್ತೀಚಿನ ದಿನಗಳಲ್ಲಿ ಫಿಲಿಪೈನ್ಸ್ಗೆ ಅಪ್ಪಳಿಸಿದ ಚಂಡಮಾರುತದಿಂದ ಸತ್ತವರ ಸಂಖ್ಯೆ 98 ಕ್ಕೆ ಏರಿದೆ ಎಂದು ರಾಷ್ಟ್ರೀಯ ವಿಪತ್ತು ಸಂಸ್ಥೆ ಸೋಮವಾರ ತಿಳಿಸಿದೆ.
ಮಿಂದನಾವೋ ಪ್ರಾತ್ಯದಿಂದ ಹೆಚ್ಚಿನ ಮೃತದೇಹಗಳನ್ನು ಪಡೆಯಲಾಗಿದೆ. ಇನ್ನೂ 63 ಮಂದಿ ನಾಪತ್ತೆಯಾಗಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಶುಕ್ರವಾರದಂದು ದಕ್ಷಿಣ ದ್ವೀಪವಾದ ಮಿಂಡನಾವೊದಲ್ಲಿ ಸಂಭವಿಸಿದ ಪ್ರವಾಹ ಮತ್ತು ಹಟಾತ್ ಭೂಕುಸಿತ ಹಳ್ಳಿಗಳನ್ನು ನಾಶಪಡಿಸಿದೆ. ಅರ್ಧದಷ್ಟು ಸಾವುಗಳು ಮಿಂಡನಾವೊ ಪ್ರಾಂತ್ಯದಲ್ಲೇ ಸಂಭವಿಸಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ