ಡಿಸೆಂಬರ್‌ನಲ್ಲಿ ಹುಟ್ಟಿದವರು ರೊಮ್ಯಾಂಟಿಕ್ ಸ್ವಭಾವದವರಂತೆ, ಇನ್ನೂ ಯಾವ್ಯಾವ ಗುಣಗಳಿವೆ ಗೊತ್ತಾ?

ಡಿಸೆಂಬರ್‌ನಲ್ಲಿ ಹುಟ್ಟಿದ ವ್ಯಕ್ತಿಗಳು ಯಾವ ರೀತಿ ಇರುತ್ತಾರೆ, ಅವರು ಯಾವ ರೀತಿ ನಡೆದುಕೊಳ್ಳುತ್ತಾರೆ? ಅವರ ಗುಣಗಳೇನು? ಡಿಸೆಂಬರ್‌ನಲ್ಲಿ ಹುಟ್ಟಿದ ವ್ಯಕ್ತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳೋದಕ್ಕೆ ಈ ಗುಣಲಕ್ಷಣಗಳು ಮುಖ್ಯ.. ಯಾವ ಗುಣಗಳಿವೆ ಅವರಲ್ಲಿ ನೋಡಿ..

  • ಇವರು ಎಷ್ಟೇ ಶ್ರೀಮಂತರಾದ್ರೂ ಕಾಲು ಮಾತ್ರ ಭೂಮಿ ಮೇಲೆಯೇ ಇರುತ್ತದೆ. ಧಿಮಾಕು ತೋರೋ ಜನ ಅಲ್ಲ.
  • ಹೆಚ್ಚುನ ಜನ ಸ್ನೇಹಿತರಿಲ್ಲ. ಆದರೆ ಇರೋ ಸ್ನೇಹಿತರನ್ನು ಬಲವಾಗಿ ನಂಬ್ತಾರೆ ಹಾಗೆ ಅವರಿಗಾಗಿ ಏನಾದರೂ ಮಾಡುತ್ತಾರೆ.
  • ಬೇರೆಯವರಿಗೆ ಮೋಟಿವೇಟ್ ಮಾಡೋದು ಇವರಿಗೆ ತುಂಬಾನೇ ಸುಲಭ. ಆದರೆ ಇವರನ್ನು ಇವರು ಹುರಿದುಂಬಿಸುವಲ್ಲಿ ಸೋಲುತ್ತಾರೆ.
  • ಇವರು ಬಹುಮುಖ ಪ್ರತಿಭೆ, ಎಲ್ಲವನ್ನೂ ಜಗತ್ತಿಗೆ ತೋರೋದಿಲ್ಲ. ಮುಜುಗರ ಜಾಸ್ತಿ.
  • ಇವರಿಗೆ ಮನೆ, ಆಫೀಸ್ ಯಾವುದೇ ಆಗಲಿ ಕ್ಲೀನ್ ಆಗಿ ಇರಬೇಕು. ವಸ್ತುಗಳು ಅದರದ್ದೇ ಜಾಗದಲ್ಲಿ ಇರಬೇಕು.
  • ಒಂದು ಬಾರಿ ಗುರಿಯನ್ನು ಆರಿಸಿದರೆ ಅದನ್ನು ಮುಟ್ಟುವವರೆಗೂ ಹಿಂದೆ ತಿರುಗುವ ಮಾತೇ ಇಲ್ಲ.
  • ಬೇರೆಯವರನ್ನು ನೋಡಿದರೆ ಇವರಿಗೆ ಕರುಣೆ ಹೆಚ್ಚು. ಪ್ರೀತಿಯಿಂದ ಕಾಣುತ್ತಾರೆ. ಪ್ರೀತಿ ಹಂಚುತ್ತಾರೆ.
  • ಇವರು ತುಂಬಾ ಲಕ್ಕಿ ಅಂತೆ, ಸಾಕಷ್ಟು ಕಷ್ಟ ಅನುಭವಿಸಿ ಸಾಕಾಯ್ತು ಎನ್ನುವ ಹೊತ್ತಿಗೆ ಅದೃಷ್ಟ ಒಲಿದುಬರುತ್ತದೆ.
  • ಯಾವಾಗಲೂ ಆಕ್ಟೀವ್ ಆಗಿರುತ್ತಾರೆ. ಸುಸ್ತಾಗೋದೇ ಇಲ್ಲ. ಹೋದಲ್ಲೆಲ್ಲಾ ಎನರ್ಜಿ ಚೆಲ್ಲುತ್ತಾರೆ.
  • ಇವರು ತುಂಬಾನೇ ಬುದ್ಧಿವಂತರು. ಹೇಳಿದ ಕೆಲಸ ಅಚ್ಚುಕಟ್ಟಾಗಿ ಮಾಡುತ್ತಾರೆ.
  • ಇವರು ಕಷ್ಟ ಅನುಭವಿಸುತ್ತಾರೆ. ಜೀವನದ ಯಾವುದೋ ಒಂದು ಭಾಗದಲ್ಲಿ ಹಣಕಾಸಿನ ಸಮಸ್ಯೆಯಿಂದ ಬೇಸರ ಅನುಭವಿಸುತ್ತಾರೆ.
  • ಮಾತನಾಡಲು ಹಿಂದೆ ಮುಂದೆ ಯೋಚಿಸೋದಿಲ್ಲ. ಮನಸ್ಸಿನಲ್ಲಿ ಇದ್ದದ್ದು ಬಾಯಿಗೆ ಬಂದೇ ಬರುತ್ತದೆ.
  • ಇವರಿಗೆ ದೇವರು, ಧ್ಯಾನ, ಅಧ್ಯಾತ್ಮದ ಬಗ್ಗೆ ಆಸಕ್ತಿ ಹೆಚ್ಚು
  • ಸಣ್ಣ ಪುಟ್ಟ ಬಂದು ಹೋಗೋ ಸಂಬಂಧಗಳ ಬಗ್ಗೆ ಇವರಿಗೆ ಆಸಕ್ತಿ ಇಲ್ಲ. ದೀರ್ಘ ಕಾಲದ ಸಂಬಂಧ ಮಾತ್ರ ಇವರಿಗಿಷ್ಟ.
  • ಇವರಿಗೆ ಸ್ವಾತಂತ್ರ ತುಂಬಾನೇ ಇಷ್ಟ. ಇವರನ್ನು ಕಟ್ಟುಹಾಕೋದು ಅಸಾಧ್ಯ.
  • ಇವರಿಗೆ ಯಾರೂ ಡಾಮಿನೇಟ್ ಅಥವಾ ಕಂಟ್ರೋಲ್ ಮಾಡಬಾರದು. ಮಾಡಿದಷ್ಟು ಉಲ್ಟಾ ಹೊಡೆಯುತ್ತಾರೆ.
  • ಇವರು ದೀರ್ಘಾಯುಷಿಗಳು ಎಂದು ಹೇಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!