ಜಾಕ್ವೆಲಿನ್ ಫರ್ನಾಂಡಿಸ್ ಜಾಮೀನು ಅರ್ಜಿ ವಿಚಾರಣೆ ಪೂರ್ಣ: ತೀರ್ಪು ನಾಳೆಗೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಂಡಿದ್ದು, ಪಟಿಯಾಲ ಹೌಸ್ ಕೋರ್ಟ್‌ ತೀರ್ಪನ್ನು ಶುಕ್ರವಾರಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಜಾಕ್ವೆಲಿನ್‌ಗೆ ನ್ಯಾಯಾಲಯ ಈಗಾಗಲೇ ಮಧ್ಯಂತರ ಜಾಮೀನು ನೀಡಿದೆ.

ಮಧ್ಯಂತರ ಜಾಮೀನು ಅವಧಿ ಇಂದಿಗೆ (ನವೆಂಬರ್ 10) ಮುಕ್ತಾಯವಾಗಲಿದೆ. ಗುರುವಾರ ಬೆಳಗ್ಗೆ ಜಾಕ್ವೆಲಿನ್ ಜಾಮೀನು ಅರ್ಜಿಯ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಆದರೆ, ಕೋರ್ಟ್ ತೀರ್ಪನ್ನು ನಾಳೆಗೆ ಮುಂದೂಡಿದೆ. ಜಾಕ್ವೆಲಿನ್‌ಗೆ ಜಾಮೀನು ನೀಡಬಾರದು ಎಂದು ಇಡಿ ವಾದಿಸಿತ್ತು. ಪ್ರಕರಣದ ತನಿಖೆಗೆ ಸಹಕರಿಸದ ಆಕೆ ತನ್ನ ಸೆಲ್ ಫೋನ್‌ನಿಂದ ಸಾಕ್ಷ್ಯವನ್ನು ಅಳಿಸಿ ಹಾಕಿದ್ದಾಳೆ ಆಕೆ ದೇಶ ತೊರೆಯಲು ಯತ್ನಿಸಿದ್ದಾಳೆ ಎಂದು ಇಡಿ ಆರೋಪಿಸಿದೆ.

ಜಾಮೀನು ಮಂಜೂರಾತಿ ಕುರಿತ ತೀರ್ಪು ಶುಕ್ರವಾರ ಹೊರಬೀಳಲಿದೆ. ಜಾಕ್ವೆಲಿನ್ ಫರ್ನಾಂಡೀಸ್ ಸುಕೇಶ್ ಚಂದ್ರಶೇಖರ್ ಅವರೊಂದಿಗೆ ಕೆಲಕಾಲ ಆಪ್ತರಾಗಿದ್ದರು. ಈ ವೇಳೆ ಸುಕೇಶ್ ಆಕೆಗೆ ದುಬಾರಿ ಉಡುಗೊರೆಗಳನ್ನೂ ನೀಡಿದ್ದಾನೆ ಎಂದು ಬಹಿರಂಗವಾಗಿದ್ದು, ಜೊತೆಗೆ ಸುಕೇಶ್ 200 ಕೋಟಿ ರೂ.ಗಳ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಇಡಿ ಪ್ರಕರಣ ದಾಖಲಿಸಿದೆ. ಸುಕೇಶ್ ಜೊತೆಗೆ ಜಾಕ್ವೆಲಿನ್ ಹೆಸರನ್ನೂ ಇಡಿ ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಸೇರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!