Tuesday, August 16, 2022

Latest Posts

ಕಾಸರಗೋಡಿನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಯೋಜನೆಯನ್ನು ತ್ವರಿತಗೊಳಿಸಲು ನಿರ್ಧಾರ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..

ಹೊಸದಿಗಂತ ವರದಿ, ಕಾಸರಗೋಡು:

ಕಾಸರಗೋಡು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ನ ನೇತೃತ್ವದಲ್ಲಿ ಚಟ್ಟಂಚಾಲ್ ಕೈಗಾರಿಕಾ ಉದ್ಯಾನದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ನಿರ್ಮಿಸಲಾಗುವ ಆಕ್ಸಿಜನ್ ಪ್ಲಾಂಟ್ ನ ಕ್ರಮಗಳನ್ನು ತ್ವರಿತಗೊಳಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ನಿಟ್ಟಿನಲ್ಲಿ 2 ಸಾವಿರ ಆಕ್ಸಿಮೀಟರ್ ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ. ಟೆಲಿ ಮೆಡಿಸಿನ್ ಸೌಲಭ್ಯ ಏರ್ಪಡಿಸಲೂ ತೀರ್ಮಾನಿಸಲಾಗಿದೆ. ಆರ್ದ್ರಂ ಯೋಜನೆಯ ಕಟ್ಟಡವನ್ನು ಕೋವಿಡ್ ವಾರ್ಡಾಗಿ ಪರಿವರ್ತಿಸುವ ನಿಟ್ಟಿನಲ್ಲಿ 8.5 ಲಕ್ಷ ರೂ.ಗಳ ಆಕ್ಸಿಜನ್ ಸೆಕ್ಷನ್ ಲೈನ್ ಸ್ಥಾಪಿಸಲಾಗುವುದು. 7.5 ಲಕ್ಷ ರೂ.ಗಳ ವಾಟರ್ ಕನೆಕ್ಷನ್ ಎಸ್ಟಿಮೇಟ್ ಗೆ ಅಂಗೀಕಾರ ನೀಡಲಾಗಿದೆ. ಸ್ಪಿನ್ ಓವರ್ ಯೋಜನೆಗಳಿಗೆ ಅಂಗೀಕಾರ ನೀಡಿಕೆ, ಯೋಜನೆಯಲ್ಲಿ ಬದಲಾವಣೆ ನಡೆಸಿ ಜಿಲ್ಲಾ ಯೋಜನಾ ಸಮಿತಿಯ ಅಂಗೀಕಾರ ಪಡೆಯುವಿಕೆ ಸಂಬಂಧ ಅಂತಿಮ ತೀರ್ಮಾನವನ್ನು ಮೇ 15 ರಂದು ಕೈಗೊಳ್ಳಲಾಗುವುದು ಎಂದು ಸಭೆಯು ತಿಳಿಸಿದೆ.
ಜಿಲ್ಲೆಯ ಡಯಾಲಿಸಿಸ್ ರೋಗಿಗಳಿಗೆ ಉಚಿತ ಡಯಾಲಿಸಿಸ್ ಸೌಲಭ್ಯಕ್ಕಾಗಿ ಡಿಸಿಪಿ ಸಿದ್ಧಗೊಳಿಸಿರುವ ಯೋಜನೆಗೆ ಸಂಬಂಧಿಸಿ ಮಾತುಕತೆ ನಡೆಸಿ ಜಿಲ್ಲಾ ಪಂಚಾಯತ್ ನ ಪಾಲು ಮೊತ್ತ ಮಂಜೂರು ಮಾಡಲಾಗುವುದು ಎಂದು ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಭೆಯಲ್ಲಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು, ಸ್ಥಾಯೀ ಸಮಿತಿಗಳ ಅಧ್ಯಕ್ಷರಾದ ಕೆ.ಶಕುಂತಲಾ, ಗೀತಾ ಕೃಷ್ಣನ್, ಸರಿತಾ ಎಸ್.ಎಲ್., ಶಿನೋಜ್ ಚಾಕೋ, ಜಿಲ್ಲಾ ಪಂಚಾಯತ್ ಸದಸ್ಯರು, ಕಾರ್ಯದರ್ಶಿ ಪಿ.ನಂದಕುಮಾರ್, ನಿರ್ವಹಣಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss