Sunday, March 7, 2021

Latest Posts

ದೇಶದಲ್ಲಿ ಸಕ್ರಿಯ ಕೋವಿಡ್ ಕೇಸ್‌ಗಳ ಇಳಿಕೆ: 21 ರಾಜ್ಯಗಳಲ್ಲಿ ಇಲ್ಲ ಹೊಸ ಸಾವು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಅಮೆರಿಕ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಕೋವಿಡ್-19ಸಾವಿನ ಪ್ರಮಾಣ ಮತ್ತೆ ಹೆಚ್ಚಳವಾಗುತ್ತಿರುವ ನಡುವೆಯೇ , ದೇಶದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 1.5 ಲಕ್ಷಕ್ಕಿಂತ ಕೆಳಕ್ಕೆ ಬಂದಿದೆ. ಹಾಗೆಯೇ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸದಾಗಿ ಸಾವಿನ ಪ್ರಕರಣಗಳು ವರದಿಯಾಗದಿರುವ ಸಮಾಧಾನಕರ ಅಂಶವನ್ನು ಕೇಂದ್ರ ಆರೋಗ್ಯ ಸಚಿವಾಲಯ ಬೊಟ್ಟು ಮಾಡಿದೆ.
ದೇಶದಲ್ಲಿ ಈಗ 1,47,306 ಸಕ್ರಿಯ ಪ್ರಕರಣಗಳಿದ್ದು, ಇದು ಶೇ.1.34ಮಾತ್ರವಾಗಿದೆ.ಹೊಸದಾಗಿ 10,584 ಪ್ರಕರಣಗಳು ವರದಿಯಾಗಿವೆ. 13,255 ಮಂದಿ ಗುಣಮುಖರಾಗಿದ್ದಾರೆ.
ಭಾರತದಲ್ಲೀಗ ದಿನನಿತ್ಯ ವರದಿಯಾಗುವ ಪಾಸಿಟಿವ್ ಪ್ರಕರಣಗಳ ಪ್ರಮಾಣವು ಶೇ.3 ಕ್ಕಿಂತ ಕೆಳಕ್ಕೆ ಬಂದಿದ್ದು ಮಂಗಳವಾರ 78 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ, ಅಸ್ಸಾಂ, ರಾಜಸ್ತಾನ, ಹರ್ಯಾಣ, ಜಮ್ಮು-ಕಾಶ್ಮೀರ, ಒಡಿಶಾ, ಆಂಧ್ರಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ಪುದುಚೇರಿ, ಲಕ್ಷದ್ವೀಪ, ಮಣಿಪುರ, ಸಿಕ್ಕಿಂ, ತ್ರಿಪುರ, ಲಡಾಖ್, ಮೇಘಾಲಯ, ಮಿಜೋರಾಮ್, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರಹವೇಲಿಗಳಲ್ಲಿ ಕಳೆದ 24 ಗಂಟೆಗಳಲ್ಲಿ ಯಾವುದೇ ಸಾವಿನ ಪ್ರಕರಣ ವರದಿಯಾಗಿಲ್ಲ.
ಫೆ.23ರ ಬೆಳಿಗ್ಗೆ 8ರವರೆಗೆ ದೇಶದಲ್ಲಿ ಒಟ್ಟು 1,17, 45,556ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.ಈ ಪೈಕಿ 64, 51,251ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದ್ದರೆ, 12,48,177ಮಂದಿ ಆರೋಗ್ಯ ಕಾರ್ಯಕರ್ತರಿಗೆ ದ್ವಿತೀಯ ಡೋಸ್ ಒದಗಿಸಲಾಗಿದೆ.40,36,124 ಮಂದಿ ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ಒದಗಿಸಲಾಗಿದೆ.
ಆದಾಗ್ಯೂ ದೇಶದ ಒಟ್ಟು ಹೊಸ ಕೋವಿಡ್ ಪ್ರಕರಣಗಳಲ್ಲಿ ಶೇ.84ರಷ್ಟು 6 ರಾಜ್ಯಗಳಿಂದ ವರದಿಯಾಗಿದೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಅತ್ಯಕ ಅಂದರೆ 5210 ಪ್ರಕರಣಗಳು ವರದಿಯಾದರೆ ಕೇರಳದಲ್ಲಿ 2,212, ತಮಿಳ್ನಾಡಿನಲ್ಲಿ 449ಪ್ರಕರಣಗಳು ವರದಿಯಾಗಿವೆ.ಮಹಾರಾಷ್ಟ್ರದಲ್ಲಿ 18, ಕೇರಳದಲ್ಲಿ 16, ಪಂಜಾಬ್‌ನಲ್ಲಿ 15ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

 

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss