ಬಿಗ್‌ಬಾಸ್ ಮನೆಗೆ ದೀಪಿಕಾ ದಾಸ್ ರೀ ಎಂಟ್ರಿ : ಇವರೇನಾ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಸೀಸನ್‌ನಲ್ಲಿ ಫಿನಾಲೆವರೆಗೂ ಬಂದಿದ್ದ ದೀಪಿಕಾ ದಾಸ್ ಈ ಸೀಸನ್‌ನಲ್ಲಿ 60 ದಿನಕ್ಕೇ ಔಟ್ ಆಗಿದ್ದಾರೆ. ಆದರೆ ಇದೀಗ ಕಲರ‍್ಸ್ ಕನ್ನಡ ಹೊಸ ಪ್ರೋಮೊವೊಂದನ್ನು ರಿಲೀಸ್ ಮಾಡಿದ್ದು, ಇದರಲ್ಲಿ ದೀಪಿಕಾ ದಾಸ್ ಮತ್ತೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಬಂದಂತೆ ಕಾಣುತ್ತಿದೆ.

ದೀಪಿಕಾ ರೀತಿಯ ಫಿಸಿಕ್ ಹಾಗೂ ಕೂದಲು ಮಾತ್ರ ಕಾಣಿಸಿದ್ದು, ಅಭಿಮಾನಿಗಳು ಇದು ದೀಪಿಕಾ ದಾಸ್ ಎಂದು ಹೇಳಿದ್ದಾರೆ. ದೊಡ್ಮನೆ ಆಟದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ಫಿನಾಲೆಗೆ ಹೋಗುವ ಕಂಟೆಸ್ಟೆಂಟ್ ಎಲಿಮಿನೇಟ್ ಆಗಿದ್ದಾರೆ ಎಂದು ಕಂಟೆಸ್ಟೆಂಟ್ಸ್ ನೆಮ್ಮದಿಯಾಗಿದ್ದರು. ಆದರೆ ಇದೀಗ ದೀಪಿಕಾ ವಾಪಾಸಾಗಿದ್ದಾರೆ ಎನ್ನಲಾಗಿದೆ.

ದೀಪಿಕಾ ಬಿಗ್‌ಬಾಸ್ ಮುಗಿದ ನಂತರ ತಮ್ಮ ಮನೆಗೆ ಹೋಗಿಲ್ಲ, ಮಾಧ್ಯಮದ ಕಣ್ಣಿಗೂ ಬಿದ್ದಿಲ್ಲ. ಹಾಗಾಗಿ ದೀಪಿಕಾ ಎಲಿಮಿನೇಟ್ ಆಗಿಲ್ಲ, ಮತ್ತೆ ವಾಪಾಸಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!