ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಣವೀರ್ ಸಿಂಗ್ ತಮ್ಮ ಮುದ್ದಾದ ಮಗಳು ಮತ್ತು ಪತ್ನಿ ದೀಪಿಕಾಗೆ ಭವ್ಯವಾದ ಸ್ವಾಗತವನ್ನು ನೀಡಲು ಸಿದ್ಧರಾಗಿದ್ದಾರೆ.
ಸೆಪ್ಟೆಂಬರ್ 8 ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ರಣವೀರ್ ಕುಟುಂಬ ಈ ಸಂದರ್ಭವನ್ನು ಆಚರಿಸಿದೆ. ಕೇಳಿಕೊಂಡಂತೆ ಮಹಾಲಕ್ಷ್ಮಿ ರಣವೀರ್ ಮನೆಗೆ ಬಂದಿದಾಳೆ. ಇದೀಗ ಚೇತರಿಸಿಕೊಂಡಿರುವ ದೀಪಿಕಾ ಮತ್ತು ಅವರ ಪುಟ್ಟ ಮಗಳನ್ನು ಸ್ವಾಗತಿಸಲು ರಣವೀರ್ ಸಿದ್ಧರಾಗಿದ್ದಾರೆ.