ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ದೀಪಿಕಾ ಪಡುಕೋಣ್ ಮಗಳು ದುವಾ ಹುಟ್ಟಿದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ದಿಲ್ಜಿತ್ ದೋಸಾಂಜ್ ಕಾನ್ಸರ್ಟ್‌ನಲ್ಲಿ ಸ್ವೀಟ್ ಸರ್‌ಪ್ರೈಸ್‌ನಂತೆ ಕಾಣಿಸಿಕೊಂಡಿದ್ದಾರೆ.
ದಿಲ್ಜಿತ್ ಕಾನ್ಸರ್ಟ್ ಎಂಜಾಯ್ ಮಾಡೋಕೆ ಬಂದಿದ್ದ ಜನರಿಗೆ ದೀಪಿಕಾ ಎಂಟ್ರಿ ಬಗ್ಗೆ ಗೊತ್ತೇ ಇರಲಿಲ್ಲ. ಹಾಡಿನ ಮಧ್ಯದಲ್ಲಿ ದೀಪಿಕಾ ಸ್ಟೇಜ್ ಮೇಲೆ ಆಗಮಿಸಿದ್ದಾರೆ. ಇದಕ್ಕೆ ಕ್ರೌಡ್ ಭರ್ಜರಿ ರೆಸ್ಪಾನ್ಸ್ ನೀಡಿದೆ. ಇದರ ಜೊತೆಗೆ ದೀಪಿಕಾ ದಿಲ್ಜಿತ್‌ಗೆ ಕನ್ನಡ ಹೇಳಿಕೊಟ್ಟಿದ್ದಾರೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ದಿಲ್ಜಿತ್‌ಗೆ ಹೇಳಿಕೊಟ್ಟಿದ್ದಾರೆ. ಅದಕ್ಕೆ ಇಡೀ ಕ್ರೌಡ್ we love you too ಎಂದು ಉತ್ತರ ನೀಡಿದೆ.
ಸದ್ಯ ಸೋಶಿಯಲ್ ಮೀಡಿಯಾ ತುಂಬಾ ಕಾನ್ಸರ್ಟ್ ಕ್ಲಿಪ್ಸ್ ವೈರಲ್ ಆಗಿದೆ. ದಿಲ್ಜಿತ್ ಬೆಂಗಳೂರಿಗೆ ಆಗಮಿಸಿ ರಾಮೇಶ್ವರಂ ಕೆಫೆ ತಿಂಡಿ ತಿಂದಿದ್ದಾರೆ. ದೀಪಿಕಾ ಕೂಡ ಮಗು ಹುಟ್ಟಿದ ನಂತರ ಮೊದಲ ಪಬ್ಲಿಕ್ ಅಪೀಯರೆನ್ಸ್ ಮಾಡೋದಕ್ಕೆ ಬೆಂಗಳೂರನ್ನೇ ಆಯ್ಕೆ ಮಾಡಿದ್ದಾರೆ.