ಹೊಸದಿಗಂತ ಆನ್ಲೈನ್ ಡೆಸ್ಕ್:
ರಾಷ್ಟ್ರೀಯ ಮಟ್ಟದ ಆಟಗಾರ್ತಿ, ನಟಿ ದೀಪಿಕಾ ಪಡುಕೋಣ್ ಒಲಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಜೊತೆ ಬ್ಯಾಡ್ಮಿಂಟನ್ ಆಡುತ್ತಿದ್ದಾರೆ.
ಇದು ಯಾವ ಪಂದ್ಯವೂ ಅಲ್ಲ, ಪಿ.ವಿ. ಸಿಂಧು ಅವರ ಜೊತೆ ಸೇರಿ ಸ್ವಲ್ಪ ಕ್ಯಾಲೋರಿ ಬರ್ನ್ ಮಾಡುತ್ತಿದ್ದೇನೆ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
ಸುಮಾರು ಸಮಯದಿಂದ ಸಿಂಧು ಹಾಗೂ ದೀಪಿಕಾ ಒಟ್ಟಿಗೇ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗೆ ಸಿಂಧು ಅವರ ಬಯೋಪಿಕ್ನಲ್ಲಿ ದೀಪಿಕಾ ಅಭಿನಯಿಸುತ್ತಿದ್ದಾರಾ ಎನ್ನುವ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಹಿಂದೆ ದೀಪಿಕಾ, ರಣ್ವೀರ್ ಸಿಂಧು ಅವರ ಜೊತೆ ಡಿನ್ನರ್ಗೆ ತೆರಳಿದ್ದರು. ಇದೀಗ ಸಿಂಧು ಅವರ ಜೊತೆ ದೀಪಿಕಾ ಹೆಚ್ಚು ಸಮಯ ಕಳೆಯುತ್ತಿರುವುದು ನೋಡಿದರೆ ಸಿನಿಮಾ ಬರೋದು ಪಕ್ಕಾ ಎನಿಸುತ್ತಿದೆ.