ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಖ್ಯಾತ ನಟಿ ದೀಪಿಕಾ ಪಡುಕೋಣ್ ಕಿಚ್ಚ ಸುದೀಪ ಬಾಡಿಗಾರ್ಡ್ ಕಿಚ್ಚ ಕಿರಣ್ ಜೊತೆ ವಿಡಿಯೋ ಕಾಲ್ನಲ್ಲಿ ಮಾತನಾಡಿದ್ದಾರೆ.
ಹೌದು, ದೀಪಿಕಾ ಕಿಚ್ಚ ಕಿರಣ್ ಅವರ ಜೊತೆ ಕನ್ನಡದಲ್ಲಿ ಮಾತನಾಡಿದ್ದಾರೆ. 83 ಸಿನಿಮಾ ಇನ್ನೇನು ಕೆಲವೇ ದಿನದಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲಿ ರಿಲೀಸ್ ಹೊಣೆಯನ್ನು ಕಿಚ್ಚ ಸುದೀಪ ಹೊತ್ತಿದ್ದು, ಪ್ರಮೋಷನ್ಸ್ಗಾಗಿ ರಣ್ವೀರ್ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಸುದೀಪ್ ಕಿರಣ್ ಅವರು ದೀಪಿಕಾ ಫ್ಯಾನ್ ಎಂದು ಹೇಳಿದ್ದಾರೆ.
ಹಲವು ವರ್ಷಗಳಿಂದ ಸುದೀಪ್ ಬಾಡಿಗಾರ್ಡ್ ಆಗಿರುವ ಕಿರಣ್ಗೆ ದೀಪಿಕಾ ಅಂದ್ರೆ ಎಲ್ಲಿಲ್ಲದ ಇಷ್ಟವಂತೆ. ಈ ವಿಷಯ ತಿಳಿದಿದ್ದ ಸುದೀಪ್ ರಣ್ವೀರ್ಗೆ ಹೇಳಿ ದೀಪಿಕಾಗೆ ವಿಡಿಯೋ ಕಾಲ್ ಮಾಡಿಸಿದ್ದಾರೆ.
ವಿಡಿಯೋ ಕಾಲ್ನಲ್ಲಿ ದೀಪಿಕಾ ಜೊತೆ ಕಿರಣ್ ಮಾತನಾಡಿದ್ದು, ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ತನ್ನ ನೆಚ್ಚಿನ ಹಿರೋಯಿನ್ ಜೊತೆ ಮಾತನಾಡಿಸಿದ್ದಕ್ಕೆ ಸುದೀಪ್ ಹಾಗೂ ರಣ್ವೀರ್ ಇಬ್ಬರನ್ನೂ ತಬ್ಬಿ ಖುಷಿ ಪಟ್ಟಿದ್ದಾರೆ.