ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಸಂಸತ್ ಚುನಾವಣೆಯಲ್ಲಿ ಪಾಕ್ ಹಣಕಾಸು ಸಚಿವ ಸೋಲು ಕಂಡಿರುವ ಕಾರಣ ಇದೀಗ ಪ್ರಧಾನಿ ಇಮ್ರಾನ್ ಖಾನ್ ಸಂಸತ್ತಿನಲ್ಲಿ ವಿಶ್ವಾಸಮತಯಾಚನೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇಂದು ರಾತ್ರಿ 7:30ಕ್ಕೆ ದೇಶವನ್ನುದ್ದೇಶಿಸಿ ಇಮ್ರಾನ್ ಖಾನ್ ಮಾತನಾಡಲಿದ್ದು, ತೀವ್ರ ಕುತೂಹಲ ಮೂಡಿಸಿದೆ.
ಸಂಸತ್ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ವಿರುದ್ಧ ಇಮ್ರಾನ್ ಖಾನ್ ಆಪ್ತ ಹಾಗೂ ಹಣಕಾಸು ಸಚಿವ ಅಬ್ದುಲ್ ಹಫೀಜ್ ಸೇಖ್ ಸೋಲು ಕಂಡಿದ್ದಾರೆ.ಇದರಿಂದಾಗಿ ಸಂಸತ್ತಿನಲ್ಲಿ ವಿಶ್ವಾಸಮತ ಯಾಚನೆ ಮಾಡಲು ಪಾಕ್ ಪ್ರಧಾನಿ ನಿರ್ಧರಿಸಿದ್ದಾರೆ. ಇತ್ತ ಗಿಲಾನಿ ಗೆಲುವು ಸಾಧಿಸುತ್ತಿದ್ದಂತೆ ವಿರೋಧ ಪಕ್ಷಗಳಿಂದ ಖಾನ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದು, ಪ್ರಧಾನಿ ಸ್ಥಾನಕ್ಕೆ ಗೌರವದಿಂದ ರಾಜೀನಾಮೆ ನೀಡುವಂತೆ ಒತ್ತಾಯಿಸಿವೆ.
ವಿಶ್ವಾಸಮತ ಯಾಚನೆ ಮಾಡುವುದಕ್ಕೂ ಮುನ್ನ ಪಾಕ್ ಪ್ರಧಾನಿ, ಅಲ್ಲಿನ ಸೇನೆ ಮುಖ್ಯಸ್ಥ ಹಾಗೂ ಐಎಸ್ಐ ಡಿಜಿ ಅವರನ್ನು ಭೇಟಿ ಮಾಡಿ ಮಾತುಕತೆ ಸಹ ನಡೆಸಿದ್ದಾಗಿ ವರದಿಯಾಗಿದೆ.