ಫೈನಲ್ ನಲ್ಲಿ ಪುಣೇರಿಗೆ ಸೋಲು: ಪ್ರೊ ಕಬಡ್ಡಿ ಲೀಗ್ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡ ಜೈಪುರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಫೈನಲ್ ನಲ್ಲಿ ಜೈಪುರ್ ಪಿಂಕ್ ಪ್ಯಾಂಥರ್ಸ್ ಭರ್ಜರಿ ಗೆಲುವು ಸಾದಿಸುವ ಮೂಲಕ ಟ್ರೋಫಿ ಮುಡಿಗೇರಿಸಿಕೊಂಡಿದೆ.

ಫೈನಲ್ ಪಂದ್ಯದಲ್ಲಿ ಇಂದು ಪುಣೇರಿ ಪಲ್ಟಾನ್ ವಿರುದ್ಧ ಹೋರಾಟ ನಡೆಸಿದ ಜೈಪುರ್ 33-29 ಅಂಕಗಳ ಅಂತರದಲ್ಲಿ ರೋಚಕ ಗೆಲುವು ಸಾಧಿಸಿತು. ಈ ಮೂಲಕ 2ನೇ ಪ್ರೋ ಕಬಡ್ಡಿಲೀಗ್ ಟ್ರೋಫಿ ವಶಪಡಿಸಿಕೊಂಡಿದೆ.

ಫಸ್ಟ್ ಹಾಫ್‌ನಲ್ಲಿ ಜೈಪುರ ಹಾಗೂ ಪುಣೇರಿ ನಡುವೆ ಸಮಬಲದ ಹೋರಾಟ ಇತ್ತು . ಬಳಿಕ ರೈಡ್ಸ್ ಪಾಯಿಂಟ್ಸ್‌ನಲ್ಲಿ ಜೈಪುರ ಮುನ್ನಡೆ ಸಾಧಿಸಿ 14-12 ಅಂಕಗಳ ಮುನ್ನಡೆ ಕಾಯ್ದುಕೊಂಡಿತು.

ದ್ವಿತಿಯಾರ್ಧದಲ್ಲಿ ಜೈಪುರ 19 ಅಂಕ ಗಳಿಸಿದರೆ, ಪುಣೇರ್ 11 ಅಂಕಗಳಿಸಿತು. ಕೊನೆಯ ಹಂತದಲ್ಲಿ ಪುಣೇರಿ ಆಕ್ರಮಣ ಆಟದ ಮೂಲಕ ಹೆಚ್ಚು ಅಂಕಗಳಿಸುವ ಪ್ರಯತ್ನ ಮಾಡಿತು. ಆದರೆ ಅಂತಿಮವಾಗಿ ಪುಣೇರಿ ಸೋಲು ಅನುಭವಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!