ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಷ್ಟ್ರ ರಾಜಧಾನಿಯಲ್ಲಿ ಆಕ್ಸಿಜನ್, ರೆಮ್ಡಿಸಿವಿರ್ ಕೊರತೆ: ಕಳವಳ ವ್ಯಕ್ತಪಡಿಸಿದ ಕೇಜ್ರಿವಾಲ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಬರೋಬ್ಬರಿ 24 ಸಾವಿರ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು , ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್ ಮತ್ತು ರೆಮ್ಡಿಸಿವಿರ್ ಔಷಧಿಯ ಕೊರತೆಯೂ ಎದುರಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕಳವಳ ವ್ಯಕ್ತಪಡಿಸಿದ್ದಾರೆ.
ನನಗೆ ಗೊತ್ತಿಲ್ಲ, ರಾಜಧಾನಿಯಲ್ಲಿ ಇದೇ ಸಾಂಕ್ರಾಮಿಕದ ತುತ್ತತುದಿ ಇರಬಹುದು. ಎಲ್ಲಾ ರಾಜ್ಯಗಳು ವೈದ್ಯಕೀಯ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿವೆ. ದೆಹಲಿಗೂ ಕೂಡ ಲಿಮಿಟ್ ಇದೆ. ನಮ್ಮಲ್ಲಿ ಬೆಡ್​ಗಳ ಕೊರತೆ, ಆಕ್ಸಿಜನ್ ಮತ್ತು ರೆಮ್ಡಿಸಿವಿರ್​ನ ಕೊರತೆಯ ಬಗ್ಗೆ ವರದಿ ಲಭ್ಯವಾಗಿದೆ ಎಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ.
ಕೆಲವು ದಿನಗಳಲ್ಲಿ ನಾವು 6,000 ಆಕ್ಸಿಜನ್ ಬೆಡ್​ಗಳನ್ನು ಸೇರಿಸಲಿದ್ದೇವೆ. ಸುಮಾರು 1,300 ಬೆಡ್​ಗಳನ್ನು ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಮತ್ತು ಕಾಮನ್​ವೆಲ್ತ್ ಗೇಮ್ಸ್ ಬಳಿ ವ್ಯವಸ್ಥೆ ಮಾಡಲಾಗಿದೆ. ರಾಡಾ ಸೊವಾಮಿ 2,500 ಬೆಡ್​ಗಳ ಸೌಲಭ್ಯ ಹೊಂದಿತ್ತು ನಂತರ 2,500 ಬೆಡ್​ಗಳನ್ನ ಸೇರಿಸಲಾಗಿದೆ. 2,100 ಬೆಡ್​ಗಳನ್ನ ಹಾಸ್ಪಿಟಲ್​ಗಳ ಜೊತೆಗೆ ಹೊಂದಾಣಿಕೆ ಮಾಡಿಕೊಂಡ ಹೋಟೆಲ್​ಗಳಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss