spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡೆಹ್ರಾಡೂನ್-ದೆಹಲಿ ಕಾರಿಡಾರ್: ಏನಿದರ ವಿಶೇಷ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿಯವರು ಇಂದು ಉತ್ತರಾಖಂಡದ ಡೆಹ್ರಾಡೂನ್‌ಗೆ ಭೇಟಿ ನೀಡಲಿದ್ದು,8300 ಕೋಟಿ ರೂಪಾಯಿ ವೆಚ್ಚದ ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ನಿರ್ಮಾಣಕ್ಕೆ ಅಡಿಗಲ್ಲು ಸ್ಥಾಪನೆ ಮಾಡಲಿದ್ದಾರೆ.

ದೆಹಲಿ ಮತ್ತು ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನಡುವಿನ ಪ್ರಯಾಣ ಸಮಯ ಇದೀಗ ಆರು ಗಂಟೆಗಳಿಷ್ಟಿದೆ. ಆದರೆ ಈ ಹೊಸ ಕಾರಿಡಾರ್‌ನಿಂದ ಈ ಸಮಯ 2.5 ಗಂಟೆಗಳಿಗೆ ಕಡಿಮೆಯಾಗುತ್ತದೆ.

ಆರ್ಥಿಕ ಕಾರಿಡಾರ್ ಹೊರತುಪಡಿಸಿ ಪ್ರಧಾನಿ ಮೋದಿಯವರು ಹತ್ತು ಅಭಿವೃದ್ಧಿ ಯೋಜನೆಗಳಿಗೆ ಶಂಕು ಸ್ಥಾಪನೆ ನೆರವೇರಿಸಲಿದ್ದು, ಏಳು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇಂದು ಪ್ರಧಾನಿ ಮೋದಿಯವರು ಚಾಲನೆ ನೀಡುತ್ತಿರುವ ಬಹುತೇಕ ಯೋಜನೆಗಳು ಡೆಹ್ರಾಡೂನ್ ರಸ್ತೆ ಮೂಲಸೌಕರ್ಯ ಸುಧಾರಣೆ ಮಾಡುವಂಥದ್ದಾಗಿದೆ. ಹಿಮಾಲಯ ಪ್ರದೇಶಗಳಲ್ಲಿ ಡೆಹ್ರಾಡೂನ್ ಕೂಡ ಒಂದಾಗಿದ್ದು, ಇಲ್ಲಿಗೆ ಉತ್ತಮ ರಸ್ತೆ ಸೌಕರ್ಯ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ.

ದೆಹಲಿಯನ್ನು ಡೆಹ್ರಾಡೂನ್‌ಗೆ ಸಂಪರ್ಕಿಸುವ ರಸ್ತೆಯ ಬಗ್ಗೆ ನೀವು ತಿಳಿಯಬೇಕಾದ ಪ್ರಮುಖ ಅಂಶಗಳು ಇಲ್ಲಿವೆ…

  • ದೆಹಲಿ-ಡೆಹ್ರಾಡೂನ್ ಆರ್ಥಿಕ ಕಾರಿಡಾರ್ ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇ ಜಂಕ್ಷನ್‌ನಿಂದ ಡೆಹ್ರಾಡೂನ್‌ವರೆಗೆ ವಿಸ್ತರಿಸುತ್ತದೆ.
  • ಈ ಕಾರಿಡಾರ್‌ನಿಂದ ದೆಹಲಿ ಮತ್ತು ಡೆಹ್ರಾಡೂನ್ ನಡುವಿನ ಅಂತರವನ್ನು 235 ಕಿ.ಮೀಯಿಂದ 210 ಕಿ.ಮೀವರೆಗೆ ಕಡಿಮೆ ಮಾಡುವ ಸಾಧ್ಯತೆ ಇದೆ.
  • ಹರಿದ್ವಾರ,ಮುಜಾಫರ್‌ನಗರ, ಶಾಮ್ಲಿ, ಯಮುನಗರ, ಬಾಗ್‌ಪತ್, ಮೀರತ್ ಮತ್ತು ಬರೌತ್ ಸಂಪರ್ಕಕ್ಕಾಗಿ ಏಳು ಪ್ರಮುಖ ಇಂಟರ್‌ಚೇಂಜ್‌ಗಳನ್ನು ಹೊಂದಿರುತ್ತದೆ.
  • ಇದು ಏಷ್ಯಾದ ಅತಿದೊಡ್ಡ ವನ್ಯಜೀವಿ ಎಲಿವೇಟರ್ ಕಾರಿಡಾರ್‌ನ್ನು ಹೊಂದಿದೆ.
  • ಉತ್ತರಾಖಂಡವು ತನ್ನ ನೈಸರ್ಗಿಕ ಸೌಂದರ್ಯ ಮತ್ತು ವನ್ಯಜೀವಿಗಳಿಗೆ ಹೆಸರುವಾಸಿ ಆಗಿರುವುದರಿಂದ ಪ್ರಾಣಿ-ವಾಹನ ಘರ್ಷಣೆ ತಪ್ಪಿಸಲು ಕಾರಿಡಾರ್ ಪ್ರಾಣಿಗಳ ಪಾಸ್‌ನ್ನು ಹೊಂದಿವೆ. ಈ ಪಾಸ್‌ಗಳನ್ನು ಪ್ರಾಥಮಿಕವಾಗಿ ಗಣೇಶ್‌ಪುರ್-ಡೆಹ್ರಾಡೂನ್ ವಿಭಾಗದಲ್ಲಿ ನಿರ್ಮಿಸಲಾಗುವುದು.
  • ಮಳೆ ನೀರು ವ್ಯರ್ಥವಾಗದ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಆರ್ಥಿಕ ಕಾರಿಡಾರ್ 500 ಮೀಟರ್ ಅಂತರದಲ್ಲಿ 400ಕ್ಕೂ ಹೆಚ್ಚು ನೀರಿನ ಚಾರ್ಜ್ ಪಾಯಿಂಟ್‌ಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗುತ್ತದೆ.
  • ಆರ್ಥಿಕ ಕಾರಿಡಾರ್‌ನಿಂದ ಹಲ್ಗೋವಾ, ಸಹರಾನ್‌ಪುರದಿಂದ ಭದ್ರಾಬಾದ್, ಹರಿದ್ವಾರಕ್ಕೆ ಸಂಪರ್ಕಿಸುವ ಯೋಜನೆಯನ್ನು ರೂ.2 ಸಾವಿರ ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುವುದು.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss