ದೆಹಲಿಯಲ್ಲಿ ಹೊಸ ರೂಲ್ಸ್: ಭಾರೀ ವಾಹನಗಳ ಸಂಚಾರಕ್ಕೆ ಸರ್ಕಾರ ಬ್ರೇಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ತಡೆಗಟ್ಟುವ ನಿಟ್ಟನಲ್ಲಿ ದೆಹಲಿ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟ ಮಾಡಿದೆ. ಮಾಲಿನ್ಯ ನಿಯಂತ್ರಿಸಲು ಈ ಹಿಂದೆ ಸಮ, ಬೆಸ ವಿಧಾನವನ್ನು ಅನುಸರಿಸಿತ್ತು. ಇದೀಗ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್‌ ಬಿದ್ದಿದೆ. ದೆಹಲಿಯಲ್ಲಿ ಭಾರೀ ವಾಣಿಜ್ಯ ವಾಹನಗಳನ್ನು ನಿಷೇಧಿಸಲು ನಿರ್ಧಾರ ಕೈಗೊಂಡಿದೆ. ಮುಂದಿನ ಅಕ್ಟೋಬರ್‌ನಿಂದ ಫೆಬ್ರವರಿ 2023 ರ ಅಂತ್ಯದವರೆಗೆ ಭಾರೀ ವಾಹನಗಳನ್ನು ದೆಹಲಿಗೆ ಅನುಮತಿಸಲಾಗುವುದಿಲ್ಲ. ಭಾರೀ ವಾಹನಗಳೆಲ್ಲವೂ ಡೀಸೆಲ್ ವಾಹನಗಲಾದ್ದರಿಂದ ಇವುಗಳಿಂದ ಮಾಲಿನ್ಯ ನಿಯಂತ್ರಣಕ್ಕೆ ಬರುವುದಿಲ್ಲ. ಹಾಗಾಗಿ ಈ ವಾಹನಗಳನ್ನು ದೆಹಲಿಯಲ್ಲಿ ಸಂಚಾರಕ್ಕೆ  ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ.

ಈ ಹಿಂದೆಯೂ ಈ ನಿರ್ಧಾರ ಜಾರಿಯಲ್ಲಿತ್ತು. ಆಗ ಈ ವಾಹನಗಳನ್ನು ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 15ರಿಂದ20 ದಿನ ಮಾತ್ರ ನಿಷೇಧಿಸಲಾಗಿತ್ತು. ಹೆಚ್ಚುತ್ತಿರುವ ಮಾಲಿನ್ಯದ ಕಾರಣ, ಈಗ ಸುಮಾರು ಐದು ತಿಂಗಳ ಕಾಲ ವಾಹನಗಳ ಮೇಲೆ ನಿಷೇಧ ಹೇರಲು ತೀರ್ಮಾನಿಸಿದೆ.

ಇತ್ತೀಚಿನ ಅಂದಾಜಿನ ಪ್ರಕಾರ ಪ್ರತಿದಿನ ಸುಮಾರು 75,000 ಟ್ರಕ್‌ಗಳು ದೆಹಲಿ ಪ್ರವೇಶಿಸುತ್ತವೆ. ದೊಡ್ಡ ಪ್ರಮಾಣದಲ್ಲಿ ಹೊರಸೂಸುವ ಹೊಗೆ ದೆಹಲಿಯಲ್ಲಿ ವಾತಾವರಣವನ್ನು ಮಲಿನಗೊಳಿಸುತ್ತಿವೆ. CNG ಮತ್ತು ಎಲೆಕ್ಟ್ರಿಕ್ ವಾಹನಗಳ ಮೇಲೆ ಯಾವುದೇ ನಿಷೇಧವಿಲ್ಲ ಎಂದು ದೆಹಲಿ ಸಾರಿಗೆ ಸಚಿವಾಲಯವು ಘೋಷಿಸಿದೆ. ಸರ್ಕಾರದ ಈ ನಿರ್ಧಾರದಿಂದ ಟ್ರಕ್ ಮತ್ತು ಲಾರಿ ಮಾಲೀಕರ ವಿರೋಧ ವ್ಯಕ್ತವಾಗುವ ಸಾಧ್ಯತೆ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!