ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ (Delhi Assembly Election 2025) ಆಯ್ಕೆಗೆ ಇಂದು ಒಂದೇ ಹಂತದಲ್ಲಿ ಚುನಾವಣೆಯ (Delhi Polls) ನಡೆದಿದೆ. ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆಯಿದ್ದು, 2025 ರ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ), ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಕಣದಲ್ಲಿವೆ. ಮತದಾರರು ಇಂದು ನಡೆದ ಒಂದೇ ಹಂತದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿ ಇವಿಎಂಗಳಲ್ಲಿ ರಾಜಕೀಯ ನಾಯಕರ ಭವಿಷ್ಯವನ್ನು ಭದ್ರವಾಗಿರಿಸಿದ್ದಾರೆ.
ದೆಹಲಿ ವಿಧಾನಭಾ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಹುತೇಕ ಬಿಜೆಪಿ ಗದ್ದುಗೆ ಏರೋದು ಪಕ್ಕಾ ಆಗಿದೆ. ಇತ್ತ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಹಿನ್ನಡೆಯಾಗಲಿದೆ ಎಂದಿದೆ. ಆದರೆ ಬಿಜೆಪಿ ಜೊತೆ ಜಿದ್ದಾಜಿದ್ದಿನ ಪೈಪೋಟಿ ನೀಡುತ್ತಿದೆ. ಇದರ ನಡುವೆ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೂ ಸಮೀಕ್ಷೆಯಲ್ಲಿ 1 ರಿಂದ 2 ಸ್ಥಾನ ಮಾತ್ರ ಗೆಲ್ಲಲಿದೆ ಎಂದಿದೆ.
ಮ್ಯಾಟ್ರಿಜ್, ಜಿವಿಸಿ ಪೋಲ್ ಸೇರಿದಂತೆ ಪ್ರಮುಖ ಸಮೀಕ್ಷೆಗಳು ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರ ಹಿಡಿಯಲಿದೆ ಎನ್ನುತ್ತಿದೆ. ಆದರೆ ದೈನಿಕ್ ಭಾಸ್ಕರ್ ಆಪ್ ಏಕಾಂಗಿಯಾಗಿ ಅಧಿಕಾರಕ್ಕೇರಲಿದೆ ಎಂದಿದೆ. ಬಿಜೆಪಿ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಲಿದೆ ಎಂದಿದೆ. ಆಪ್ ಸತತ 3ನೇ ಬಾರಿ ಅಧಿಕಾರಕ್ಕೇರುವುದರಲ್ಲಿ ಅನುಮಾನವಿಲ್ಲ ಎಂದು ದೈನಿಕ್ ಭಾಸ್ಕರ್ ಸಮೀಕ್ಷೆ ನುಡಿದಿದೆ.
ಮ್ಯಾಟ್ರಿಜ್ ಸಮೀಕ್ಷೆ
ಬಿಜೆಪಿ: 35-40
ಆಪ್:32-37
ಕಾಂಗ್ರೆಸ್:01
ಜಿವಿಸಿ ಪೋಲ್ ಸಮೀಕ್ಷೆ
ಬಿಜೆಪಿ: 39-45
ಆಪ್: 22-31
ಕಾಂಗ್ರೆಸ್: 0-2
ಇತರ: 0-01
ಪಿ ಮಾರ್ಕ್ ಸಮೀಕ್ಷೆ
ಬಿಜೆಪಿ: 39-49
ಆಪ್:21-31
ಕಾಂಗ್ರೆಸ್:0-1
ಪೀಪಲ್ಸ್ ಇನ್‌ಸೈಟ್ ಸಮೀಕ್ಷೆ
ಬಿಜೆಪಿ: 40-44
ಆಪ್: 25-29
ಕಾಂಗ್ರೆಸ್:0-2
ಪೀಪಲ್ಸ್ ಪಲ್ಸ್ ಸಮೀಕ್ಷೆ
ಬಿಜೆಪಿ: 51-60
ಆಪ್: 10-19
ಕಾಂಗ್ರೆಸ್: 00
ಚಾಣಾಕ್ಯ ಸ್ಟಾರ್ಟರ್ಜಿ ಸಮೀಕ್ಷೆ
ಬಿಜೆಪಿ: 39-44
ಆಪ್: 25-28
ಕಾಂಗ್ರೆಸ್: 2-3
ಪೋಲ್ ಡೈರಿ ಸಮೀಕ್ಷೆ
ಬಿಜೆಪಿ: 44
ಆಪ್:22
ಕಾಂಗ್ರೆಸ್:1