ಅಗ್ನಿಶಾಮಕ ವಾಹನ ಸೇವೆಗೆ ಎರಡು ರೋಬೋಟ್‌ಗಳ ಸೇರ್ಪಡೆ, ದೆಹಲಿಯಲ್ಲಿ ಪ್ರಾಯೋಗಿಕ ಪರೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಅಗ್ನಿಶಾಕ

ಅರವಿಂದ್ ಕೇಜ್ರಿವಾಲ್ ಸರ್ಕಾರವು ದೆಹಲಿಯಲ್ಲಿ ಬೆಂಕಿ ನಂದಿಸಲು ರೋಬೋಟ್‌ಗಳನ್ನು ಬಳಸುವ ವಿಶಿಷ್ಟ ಕ್ರಮವನ್ನು ಕೈಗೊಂಡಿದೆ. ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ದೆಹಲಿಯ ಅಗ್ನಿಶಾಮಕ ವಾಹನ ಸೇವೆಗೆ ಎರಡು ರೋಬೋಟ್‌ಗಳನ್ನು ಸೇರಿಸಿದ್ದು, ಇದು ಕಿರಿದಾದ ರಸ್ತೆಗಳು, ಗೋದಾಮು, ನೆಲಮಾಳಿಗೆ, ಮೆಟ್ಟಿಲು, ಕಾಡುಗಳಲ್ಲಿ ಬೆಂಕಿಯನ್ನು ನಂದಿಸಲು ಮತ್ತು ತೈಲ ಮತ್ತು ರಾಸಾಯನಿಕ ಟ್ಯಾಂಕರ್‌ಗಳು ಮತ್ತು ಕಾರ್ಖಾನೆಗಳಂತಹ ಸ್ಥಳಗಳನ್ನು ಪ್ರವೇಶಿಸಲು ನೆರವಾಗುತ್ತದೆ.

ದೇಶದಲ್ಲಿ ಅಗ್ನಿ ಅವಘಡ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. ಇ-ರಿಮೋಟ್ ನಿಯಂತ್ರಿತ ಅಗ್ನಿಶಾಮಕ ರೋಬೋಟ್‌ಗಳು ಕಿರಿದಾದ ಲೇನ್‌ಗಳನ್ನು ನ್ಯಾವಿಗೇಟ್ ಮಾಡಲು, ಮನುಷ್ಯರಿಗೆ ಪ್ರವೇಶಿಸಲಾಗದ ಸ್ಥಳಗಳನ್ನು ತಲುಪಲು ಸಾಧ್ಯವಾಗುತ್ತದೆ.

ಈ ಕುರಿತು ಮಾತನಾಡಿದ ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್, ”ಮೊದಲ ಬಾರಿಗೆ ಇಂತಹ ರಿಮೋಟ್ ಕಂಟ್ರೋಲ್ ರೋಬೋಟ್‌ಗಳನ್ನು ಬೆಂಕಿಯನ್ನು ನಿಯಂತ್ರಿಸುವ ಸಲುವಾಗಿ ದೇಶಕ್ಕೆ ತರಲಾಗಿದೆ. ಪ್ರಸ್ತುತ ದೆಹಲಿ ಸರ್ಕಾರವು ಅಂತಹ 2 ರೋಬೋಟ್‌ಗಳನ್ನು ಪರಿಚಯಿಸಿದೆ, ಪ್ರಯೋಗ ಯಶಸ್ವಿಯಾದರೆ, ಅಂತಹ ಹೆಚ್ಚಿನ ರೋಬೋಟ್‌ಗಳನ್ನು ಅಗ್ನಿಶಾಮಕ ಸೇವೆಗೆ ಸೇರಿಸಲಾಗುತ್ತದೆ. ಇ ರಿಮೋಟ್-ನಿಯಂತ್ರಿತ ರೋಬೋಟ್‌ಗಳು ಅಗ್ನಿಶಾಮಕ ದಳದ ಕೆಲ ಪ್ರಮುಖ ದೋಷನಿವಾರಣೆಯಲ್ಲಿ ಕೆಲಸ ಮಾಡಲಿವೆ.

ಈ ರೋಬೋಟ್‌ಗಳು ಪ್ರತಿ ನಿಮಿಷಕ್ಕೆ 2,400 ಲೀಟರ್ ನೀರಿನ್ನು ಬಿಡುಗಡೆ ಮಾಡುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳ ಬಳಕೆಯಿಂದ ಅಗ್ನಿಶಾಮಕ ಸಿಬ್ಬಂದಿಗೆ ಎದುರಾಗುವ ಅಪಾಯಗಳು ಕಡಿಮೆಯಾಗಲಿವೆ ಎಂದು ಜೈನ್ ಹೇಳಿದರು. ಈ ರೋಬೋಟ್‌ಗಳನ್ನು ಆಸ್ಟ್ರಿಯಾದ ಕಂಪನಿಯಿಂದ ಖರೀದಿಸಲಾಗಿದ್ದು, ಕೆಲವು ತಿಂಗಳ ಹಿಂದೆ, ಟಿಕ್ರಿ ಕಲಾನ್‌ನ ಪಿವಿಸಿ ಮಾರುಕಟ್ಟೆಯಲ್ಲಿ ಸಂಭವಿಸಿದ ಬೆಂಕಿ ಘಟನೆಯನ್ನು ಈ ರೋಬೋಟ್‌ಗಳ ಸಹಾಯದಿಂದ ನಿಯಂತ್ರಿಸಲಾಯಿತು ಎಂದು ಸಚಿವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!