ಅಕ್ರಮ ಕಿಡ್ನಿ ಮಾರಾಟ ಜಾಲವನ್ನು ಬೇಧಿಸಿದ ದೆಹಲಿ ಪೋಲೀಸ್:‌ 10 ಜನರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಕ್ರಮ ಕಿಡ್ನಿ ಮಾರಾಟ ದಂಧೆಯನ್ನು ದೆಹಲಿ ಪೋಲೀಸರು ಭೇದಿಸಿದ್ದು ಒಟ್ಟೂ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬ ಸ್ವತಃ ವೈದ್ಯನಾಗಿದ್ದು ಉಳಿದವರು ವೈದ್ಯಕೀಯ ತಂತ್ರಜ್ಞರು ಮತ್ತು ಸಹಾಯಕರು ಎಂದು ತಿಳಿದುಬಂದಿದೆ.

ದೆಹಲಿಯ ಹೌಜ್‌ ಖಾಸ್‌ ಪ್ರದೇಶದಲ್ಲಿ ಅಕ್ರಮ ಕಿಡ್ನಿ ಕಸಿ ದಂಧೆಯ ಕುರಿತು ಪ್ರಕರಣ ದಾಖಲಾಗಿತ್ತು. ಇದರ ತನಿಖೆಯ ವೇಳೆ 10 ಜನರ ಜಾಲವನ್ನು ಭೇದಿಸುವಲ್ಲಿ ಪೋಲೀಸರು ಯಶಸ್ವಿಯಾಗಿದ್ದಾರೆ. ಈ ಗುಂಪಿನ ಸದಸ್ಯರು ಬಡವರನ್ನು ಗುರುತಿಸಿ ಅವರಿಗೆ ಹಣದ ಆಸೆ ತೋರಿಸಿ ಕಿಡ್ನಿ ಮಾರಲು ಪುಸಲಾಯಿಸುತ್ತಿದ್ದರು. ಅವರಿಂದ ಕಿಡ್ನಿ ಪಡೆದು ಅಗತ್ಯವಿರುವ ಶ್ರೀಮಂತರಿಗೆ ಅದನ್ನು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

ಪ್ರಸ್ತುತ 10 ಆರೋಪಿಗಳನ್ನು ಬಂಧಿಸಲಾಗಿದ್ದು ಹೆಚ್ಚಿನ ತನಿಖೆ ಜಾರಿಯಲ್ಲಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!