ದೆಹಲಿ ಮಾಲಿನ್ಯ ಕೊಂಚ ಸುಧಾರಣೆ: AQIನಲ್ಲಿ 221ರಷ್ಟು ದಾಖಲಾದ ಗಾಳಿ ಗುಣಮಟ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಸ್ವಲ್ಪ ಸುಧಾರಣೆ ಕಂಡಿದೆ. ಮಂಗಳವಾರ ಬೆಳಿಗ್ಗೆ ಗಾಳಿಯ ಗುಣಮಟ್ಟ AQIನಲ್ಲಿ 221 ರಷ್ಟು ದಾಖಲಿಸಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ ವ್ಯವಸ್ಥೆ (SAFAR) ತಿಳಿಸಿದೆ.
ರಾಷ್ಟ್ರೀಯ ರಾಜಧಾನಿ ಪ್ರದೇಶವು (NCR) ಗಾಳಿಯ ಗುಣಮಟ್ಟದಲ್ಲಿ ಸ್ವಲ್ಪ ಸುಧಾರಣೆಗೆ ಸಾಕ್ಷಿಯಾಗಿದೆ. ಗುರುಗ್ರಾಮ್‌ನಲ್ಲಿ (AQI) 162ದಾಖಲಾಗಿದ್ದು, ದೆಹಲಿ ವಿಮಾನ ನಿಲ್ದಾಣ  (T3) AQI 218, ನೋಯ್ಡಾ ನಗರ AQI 302 ರಷ್ಟಿದ್ದು ‘ಅತ್ಯಂತ ಕಳಪೆ’ ಮಟ್ಟದಲ್ಲಿ ಮುಂದುವರೆದಿದೆ.

ಇತರ ಸ್ಥಳಗಳ ಕುರಿತು ಹೇಳುವುದಾದರೆ, ಧೀರ್‌ಪುರ AQI 303, ಲೋಧಿ ರಸ್ತೆAQI 152, ಮಥುರಾ ರಸ್ತೆ AQI 232, ಪೂಸಾ AQI 186 ದಾಖಲಿಸಿದೆ.

0 ರಿಂದ 100 ರವರೆಗಿನ ವಾಯು ಗುಣಮಟ್ಟ ಸೂಚ್ಯಂಕವನ್ನು ಉತ್ತಮವೆಂದು ಪರಿಗಣಿಸಲಾಗುತ್ತದೆ, ಆದರೆ 100 ರಿಂದ 200 ರವರೆಗೆ ಅದು ಮಧ್ಯಮವಾಗಿರುತ್ತದೆ, 200 ರಿಂದ 300 ರವರೆಗೆ ಅದು ಕಳಪೆಯಾಗಿರುತ್ತದೆ ಮತ್ತು 300 ರಿಂದ 400 ರವರೆಗೆ ಅದು ತುಂಬಾ ಕಳಪೆಯಾಗಿದೆ ಮತ್ತು 400 ರಿಂದ 500 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಅದನ್ನು ಅತ್ಯಂತ ತೀವ್ರ ಮಟ್ಟ ಎಂದು ಪರಿಗಣಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!