ಉದ್ದೇಶಪೂರ್ವಕ ಕೇಸರಿ ಬಣ್ಣಕ್ಕೆ ಅವಮಾನ: ಯತ್ನಾಳ್ ಕಿಡಿ

ಹೊಸದಿಗಂತ ವರದಿ,ಕಲಬುರಗಿ:

ಉದ್ದೇಶಪೂರ್ವಕವಾಗಿ ಕೇಸರಿ ಬಣ್ಣದ ಬಿಕಿನಿಯನ್ನು ಪಠಾಣ್ ಚಿತ್ರದಲ್ಲಿ ನಟಿ ದೀಪಿಕಾ ಪಡಕೋಣೆ ಧರಿಸಿ ಅವಮಾನ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಸಿನಿಮಾಗಳನ್ನು ‌ಮಾಡಿಯೇ ಈಗಾಗಲೇ, ಅಮಿರ್‌ಖಾನ್ ಸಿನಿಮಾ ಇಲ್ಲದೇ ಕುಳಿತಿದ್ದಾನೆ. ಆದಷ್ಟು ಬೇಗ ಶಾಹಾರುಖ್ ಖಾನ್ ಸಹ ಮಣ್ಣು ಮುಕ್ಕಲಿದ್ದಾನೆ ಎಂದರು.

ಡಿಕೆ ಶಿವಕುಮಾರ್ ವಿರುದ್ಧ ಕಿಡಿ:

ಕುಕ್ಕರ್ ಬ್ಲಾಸ್ಟ್ ಶಂಕಿತ ಉಗ್ರ ಶಾರೀಕ್ ಪರ ಡಿಕೆಶಿ ಬ್ಯಾಟಿಂಗ್ ವಿಚಾರದ ಕುರಿತು ಇದೆ ವೇಳೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಗೆ ಕುಕ್ಕರ್ ಮೇಲೆ ಬಹಳ ಪ್ರೀತಿ ಇದ್ದ ಹಾಗೇ ಕಾಣುತ್ತಿದೆ. ಮಂಗಳೂರ ಕುಕ್ಕರ್ ಮೇಲೂ ಇದೆ, ಬೆಳಗಾಂವ್ ಕುಕ್ಕರ್ ಮೇಲೂ ಪ್ರೀತಿ ಇದೆ ಎಂದು ಪರೋಕ್ಷವಾಗಿ‌ ವ್ಯಂಗ್ಯವಾಡಿದರು.

ಡಿ.ಕೆ ಶಿವಕುಮಾರ ಎಲ್ಲರೂ ನಮ್ಮ ಬ್ರದರ್ಸ್ ಅಂತಾರೆ, ಶಾರೀಕ್ ಸಹ ಬ್ರದರ್ ಇರಬಹುದು. ಕಾಂಗ್ರೆಸ್ ಒಂದು ಪಾಕಿಸ್ತಾನ್ ಪಾರ್ಟಿ ಆದ್ದರಿಂದ ಹೀಗೆ ಮಾತಾಡುವುದು ಸಹಜ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!