Wednesday, August 10, 2022

Latest Posts

ರಾಜ್ಯ- ಕೇಂದ್ರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ: ಅಧಿಕಾರಿಗಳಿಗೆ ಡಿವೈಎಸ್‌ಪಿ ಸಲಹೆ

ಹೊಸ ದಿಗಂತ ವರದಿ, ಶಿವಮೊಗ್ಗ:

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬಡವರಿಗಾಗಿ ಸಾಕಷ್ಟು ಜನಪರ ಯೋಜನೆಗಳ ಜಾರಿಗೆ ತಂದಿವೆ ಅದನ್ನು
ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿ ಎಂದು ಶಿವಮೊಗ್ಗ ಲೋಕಾಯುಕ್ತ ಡಿವೈಎಸ್‌ಪಿ ಪುರುಷೋತ್ತಮ್ ಅಧಿಕಾರಿಗಳಿಗೆ ಸಲಹೆ ನೀಡಿದರು.
ಹೊಸನಗರ ತಾಲೂಕು ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರು ಹಾಗೂ ಅಧಿಕಾರಿಗಳ ಕುಂದುಕೊರತೆ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ತಮ್ಮ ಕಛೇರಿಗೆ ಬರುವಾಗ ಶಿಸ್ತು ಸಂಯಮದಿಂದ ಬರಬೇಕು. ಸಮಯಕ್ಕೆ ಸರಿಯಾಗಿ
ಕೆಲಸಕ್ಕೆ ಹಾಜರಾಗಬೇಕು. ತಮ್ಮ ಕಚೇರಿಯನ್ನು ಸುಂದರವಾಗಿಟ್ಟುಕೊಳ್ಳಬೇಕು. ತಮ್ಮ ಕಚೇರಿಗೆ ಬರುವ ಪ್ರತಿಯೊಬ್ಬರ ಕುಂದುಕೊರತೆಯನ್ನು ಸಂಯಮದಿಂದ ಆಲಿಸಿ ನಂತರ ಅದಕ್ಕೆ ಉತ್ತರ ಹುಡುಕಿ ಅವರ ಕೆಲಸವನ್ನು ಮಾಡಿಕೊಡಬೇಕು. ತಮ್ಮ ಕಛೇರಿಯಿಂದ ಅಗದೇ ಇರುವ ಕೆಲಸವನ್ನು ಯಾವ ಕಾರಣದಿಂದ ಆಗುವುದಿಲ್ಲ ಎಂದು ಅವರ ಅರ್ಜಿಗೆ ಹಿಂಬರಹ ನೀಡಬೇಕು. ಸುಖ ಸುಮ್ಮನೆ ಯಾವುದೇ ವ್ಯಕ್ತಿಯನ್ನು ಕಚೇರಿಗಳಿಗೆ ಅಲೆದಾಡಿಸಬಾರದು. ಅರ್ಜಿ ಹಾಕಿರುವ ವ್ಯಕ್ತಿಯಿಂದ ಯಾವುದೇ ಅಪೇಕ್ಷೆ ಇಟ್ಟುಕೊಳ್ಳದೇ ಅವರ ಕೆಲಸ ಮಾಡಿಕೊಡಬೇಕು ಎಂದರು.
ಹೊಸನಗರ ತಾಲ್ಲೂಕಿನ ಎಲ್ಲ ಸರ್ಕಾರಿ ಕಛೇರಿ ಅಧಿಕಾರಿಗಳು ಆಗಮಿಸಿ ತಮ್ಮ ತಮ್ಮ ಕಚೇರಿಯಲ್ಲಿರುವ ಸಮಸ್ಯೆಗಳನ್ನು ಹೇಳಿಕೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss