Wednesday, August 10, 2022

Latest Posts

ಮಹಿಳೆ ಮೂಗಿಗೆ ಪಂಚ್ ಮಾಡಿದ ಜೊಮ್ಯಾಟೊ ಡೆಲಿವರಿ ಬಾಯ್ ಬಂಧನ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಡೆಲಿವರಿ ತಡವಾಗಿದ್ದನ್ನು ಪ್ರಶ್ನಿಸಿದ ಮಹಿಳೆ ಮೂಗಿಗೆ ಗುದ್ದಿ ಹೋಗಿದ್ದ ಜೊಮ್ಯಾಟೊ ಡೆಲಿವರಿ ಬಾಯ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಡೆಲಿವರಿ ತಡವಾಗಿದ್ದಕ್ಕೆ ಮಹಿಳೆ ಆತನನ್ನು ಪ್ರಶ್ನಿಸಿದಾಗ,ಮಾತಿಗೆ ಮಾತು ಬೆಳೆದಿದೆ. ಮೂಗಿಗೆ ಪಂಚ್ ಮಾಡಿ ಹೋದ ಡೆಲಿವರಿ ಬಾಯ್ ಕಾಮ್‌ರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಹಿಳೆ ಹಿತೇಶಾ ಚಂದ್ರಾಣಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದು, ಘಟನೆಯನ್ನು ವಿವರಿಸಿದ್ದಾರೆ.
ಜೊಮ್ಯಾಟೊದಲ್ಲಿ ಆರ್ಡರ್ ಮಾಡಿದ್ದಆಹಾರದ ಡೆಲಿವರಿ ಲೇಟಾಗಿದೆ ಎಂದು ಸ್ವೀಕರಿಸಲು ಹಿತೇಶಾ ನಿರಾಕರಿಸಿದ್ದಾರೆ. ಜೊಮ್ಯಾಟೊ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದು, ಕಸ್ಟಮೇರ್ ಕೇರ್‌ನಲ್ಲಿ ಆಹಾರ ತೆಗೆದುಕೊಂಡು ವಾಪಾಸಾಗುವಂತೆ ಕಾಮ್‌ರಾಜ್‌ಗೆ ಹೇಳಲಾಗಿದೆ. ಇದರಿಂದ ಕೋಪಗೊಂಡ ಕಾಮ್‌ರಾಜ್‌ ನಾನು ನಿನ್ನ ಗುಲಾಮನಲ್ಲ ಎಂದು ಕೂಗಿದ್ದಾನೆ. ಆತ ಕೂಗಿದ್ದನ್ನು ನೋಡಿ ಹಿತೇಶಾ ಬಾಗಿಲು ಹಾಕಿಕೊಳ್ಳಲು ಮುಂದಾದಾಗ ಕಾಮ್‌ರಾಜ್ ಆಕೆಯನ್ನು ತಡೆದು, ಆಹಾರದ ಪೊಟ್ಟಣ ಕಸಿದುಕೊಂಡು ಆಕೆಯ ಮೂಗಿಗೆ ಗುದ್ದಿ ಹೋಗಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ.
ಮೂಗಿನ ಮೂಳೆ ಮುರಿದಿದ್ದು, ಶಸ್ತ್ರಚಿಕಿತ್ಸೆ ಅವಶ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಜೊಮ್ಯಾಟೊ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು, ಪೊಲೀಸ್ ತನಿಖೆ ಹಾಗೂ ವೈದ್ಯಕೀಯ ನೆರವು ನೀಡುವುದಾಗಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss