Thursday, August 18, 2022

Latest Posts

ರಾಜ್ಯಕ್ಕೂ ಎಂಟ್ರಿ ಕೊಟ್ಟ ಡೆಲ್ಟಾ ರೂಪಾಂತರಿ AY 4.2 ವೈರಸ್ !

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದಲ್ಲಿಯೂ ಡೆಲ್ಟಾ ರೂಪಾಂತರಿಯ AY 4.2  ಹೊಸ ತಳಿ ಪತ್ತೆಯಾಗಿದೆ.
ಈ ರೂಪಾಂತರಿ ಹೊಸ ತಳಿಗೆ ವೇಗವಾಗಿ ಹರಡುವ ಸಾಮರ್ಥ್ಯ ಇದ್ದು, ರಾಜ್ಯದಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಆಂಧ್ರಪ್ರದೇಶದಲ್ಲಿ 7, ಕೇರಳದಲ್ಲಿ 4, ಕರ್ನಾಟಕ, ತೆಲಂಗಾಣದಲ್ಲಿ 2 ಮತ್ತು ಮಹಾರಾಷ್ಟ್ರ, ಜಮ್ಮುಕಾಶ್ಮೀರದಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾತನಾಡಿದ್ದು, ರಷ್ಯಾ, ಇಂಗ್ಲೆಂಡ್ ಮಾತ್ರವಲ್ಲ ನಮ್ಮ ದೇಶದಲ್ಲಿಯೂ ಹೊಸ ತಳಿ ಬಂದಿದೆ. ಈ ಬಗ್ಗೆ ಹಿರಿಯ ತಜ್ಞರ ಜೊತೆ ಚರ್ಚಿಸಿದ್ದೇವೆ. ಮೂರನೇ ಅಲೆ ನಿಯಂತ್ರಣ, ಹೊಸ ತಳಿ ತೀವ್ರತೆ ಹಾಗೂ ಲಸಿಕೆ ಪಡೆದವರ ಮೇಲಿನ ಪರಿಣಾಮಗಳ ಬಗ್ಗೆ ಚರ್ಚಿಸಿ ಹೊಸ ಮಾರ್ಗಸೂಚಿ ರೂಪಿಸಲಾಗುವುದು ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!