ಅಂಜನಾದ್ರಿ ಫೋಟೋಗೆ ಭಾರೀ ಬೇಡಿಕೆ: ಲಕ್ಷಾಂತರ ಫೋಟೋಗಳ ಮಾರಾಟ

ಹೊಸದಿಗಂತ ವರದಿ ಗಂಗಾವತಿ:

ಹನುಮ ಜನ್ಮ ಭೂಮಿ ಅಂಜನಾದ್ರಿ ಬೆಟ್ಟದಲ್ಲಿ ಹನುಮನ ಫೋಟೋಗೆ ಭಾರೀ ಬೇಡಿಕೆ ಇದ್ದು, ಸೋಮವಾರ ಲಕ್ಷಾಂತರ ಫೋಟೋಗಳನ್ನು ಮಾರಾಟ ವಾಗಿವೆ.
ಹನುಮ ಮಾಲಾಧಾರಿಗಳು ಅಂಜನಾದ್ರಿ ಬೆಟ್ಟ ಹಾಗೂ ಮೂರ್ತಿಯ ಫೋಟೋಗಳನ್ನು ಖರೀದಿಸಿದರು. ಬೆಟ್ಟದ ಸುತ್ತಲೂ ನೂರಾರು ಅಂಗಡಿಗಳು ಹಾಕಲಾಗಿದ್ದು, ಅಂಜನಾದ್ರಿ ಫೋಟೋ ಗಳೇ ರಾರಾಜಿಸುತ್ತಿದ್ದವು.

ಬೆಳಗಾವಿ, ಹುಬ್ಬಳ್ಳಿ, ಹೊಸಪೇಟೆ, ಬಳ್ಳಾರಿ, ರಾಯಚೂರು ಸೇರಿ ರಾಜ್ಯಾದ್ಯಂತ ಸುಮಾರು ಎರಡು ಲಕ್ಷ ಹನುಮ ಮಾಲಾಧಾರಿಗಳು ಆಗಮಿಸಿದ್ದು, ವ್ಯಾಪಾರ ವಹಿವಾಟು ಜೋರಾಗಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!