ರೈತರ ಮೇಲೆ ದೌರ್ಜನ್ಯ ಖಂಡಿಸಿ ಯಲ್ಲಾಪುರದಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ

ಹೊಸದಿಗಂತ ವರದಿ,ಯಲ್ಲಾಪುರ :

ವನ್ಯಜೀವಿಗಳ ದಾಳಿ, ಸೊಪ್ಪಿನ ಬೆಟ್ಟದ ಬಳಕೆಗೆ ವಿಘ್ನ, ಅಧಿಕಾರಿಗಳು ಅಸಡ್ಡೆ ಹಾಗೂ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ರೈತರ ಹಕ್ಕುಗಳ ಸಂರಕ್ಷಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಕೆಲಕಾಲ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ನಂತರ ತಾಲೂಕು ಆಡಳಿತ ಕಚೇರಿಯ ಮುಂಭಾಗದಲ್ಲಿ ಜಮಾಯಿಸಿದ ರೈತರು, ಅಧಿಕಾರಿಗಳ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತರ ಹಕ್ಕುಗಳ ಸಂರಕ್ಷಣಾ ಸಮಿತಿಯ ತಾಲೂಕಾಧ್ಯಕ್ಷ ಆರ್.ಕೆ.ಭಟ್‌ ಕಿಚ್ಚುಪಾಲ, ಅರಣ್ಯ ಇಲಾಖೆ, ಕಂದಾಯ ಇಲಾಖೆ , ದಸ್ತಾವೇಜುಗಳ ನೋಂದಣಿ ಇಲಾಖೆ ರೈತರ ಸಮಸ್ಯೆ ಬಗ್ಗೆ ದಿವ್ಯ ನಿರ್ಲಕ್ಷ ತೋರಿಸುತ್ತಿವೆ. ದಿನೇ ದಿನೇ ಅನೇಕ ರೈತರ ಹಕ್ಕು ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿವೆ. ಎಲ್ಲಿಂದಲೋ ಬರುವ ಅಧಿಕಾರಿಗಳು ಸ್ಥಳೀಯ ರೈತರ ಸಮಸ್ಯೆಗಳನ್ನು ತಿಳಿದು ನಡೆಯಬೇಕಿದೆ. ಮಾಹಿತಿ ಇಲ್ಲದೆ ರೈತರಿಗೆ ಸಾರ್ವಜನಿಕರಿಗೆ ಹಾರಿಕೆಯ ಉತ್ತರ ನೀಡುವ ಅವರ ನಡೆ ಖಂಡನೀಯಎಂದರು.
ವಿಧಾನ ಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಸ್ಥಳೀಯ ರೈತರ ಸಮಸ್ಯೆಯನ್ನು ಅಧಿಕಾರಿಗಳು ಮೇಲ್ಮಟ್ಟದಲ್ಲಿ ತಲುಪಿಸಲು ವಿಫಲರಾಗುತ್ತಿದ್ದಾರೆ. ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ರೈತರ ಈ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಕೆ.ಟಿ. ಭಟ್, ಸಹಕಾರ್ಯದರ್ಶಿ ಸಿ ಟಿ ಹೆಗಡೆ, ಸದಸ್ಯರಾದ ಗಣಪತಿ ಕರುಮನೆ, ವಿ.ಎಂ. ಹೆಗಡೆ ಜಾಲೀಮನೆ, ನಾಗೇಂದ್ರ ಭಟ್, ರೈತ ಸಂಘದ ಅಧ್ಯಕ್ಷ ನಾಗೇಶ್ ಹೆಗಡೆ ಪಾಣತಗೇರಿ, ತಾ.ಪಂ. ಮಾಜಿ ಅಧ್ಯಕ್ಷ ರವಿ ಕೈಟಕರ್, ಪ್ರಮುಖರಾದ ಉಮೇಶ್ ಭಾಗ್ವತ್, ಎಂ.ಆರ್. ಹೆಗಡೆ, ನಾಗರಾಜ ಕವಡಿಕೇರಿ, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ರವಿ ಹೆಗಡೆ ಸೇರಿದಂತೆ ವಿವಿಧ ಸಂಘದ ಪ್ರಮುಖರು, ರೈತ ಮುಖಂಡರು ಇದ್ದರು. ಶಿರಸಿ ಉಪವಿಭಾಗಾಧಿಕಾರಿ ಕಾವ್ಯಾರಾಣಿ ಸ್ಥಳದಲ್ಲಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!