ದೆಹಲಿಯಲ್ಲಿ ಹೆಚ್ಚಾಗುತ್ತಿದೆ ಡೆಂಗ್ಯೂ ಪ್ರಕರಣಗಳು: ಹೊಸ ಸೋಂಕಿತರ ಸಂಖ್ಯೆ 396ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಹೊಸ ಸೋಂಕಿತರ ಸಂಖ್ಯೆ 396ಕ್ಕೆ ಏರಿಕೆಯಾಗಿದೆ.

ಸೋಮವಾರ ಬಿಡುಗಡೆಯಾದ ನಾಗರಿಕ ಸಮಿತಿಯ ವರದಿ ಪ್ರಕಾರ, ಸೆಪ್ಟೆಂಬರ್ 17 ರವರೆಗೆ ಈ ತಿಂಗಳೊಂದರಲ್ಲಿ 152 ಪ್ರಕರಣಗಳು ವರದಿಯಾಗಿವೆ. ನಗರದಲ್ಲಿ ಸೆಪ್ಟೆಂಬರ್ 9 ರವರೆಗೆ 295 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಕಳೆದ ಒಂದು ವಾರದಲ್ಲಿ 101 ಹೊಸ ಪ್ರಕರಣಗಳು ವರದಿಯಾಗಿವೆ. ಈ ವರ್ಷ ಸೆಪ್ಟೆಂಬರ್ 17 ರವರೆಗೆ ದಾಖಲಾದ ಒಟ್ಟು 396 ಪ್ರಕರಣಗಳಲ್ಲಿ 75 ಆಗಸ್ಟ್‌ನಲ್ಲಿ ವರದಿಯಾಗಿದೆ.

ಈ ರೋಗದಿಂದ ಯಾವುದೇ ಸಾವು ಸಂಭವಿಸಿಲ್ಲ. ವೆಕ್ಟರ್-ಹರಡುವ ರೋಗಗಳ ಪ್ರಕರಣಗಳು ಸಾಮಾನ್ಯವಾಗಿ ಜುಲೈ ಮತ್ತು ನವೆಂಬರ್ ನಡುವೆ ವರದಿಯಾಗುತ್ತವೆ. ಕೆಲವೊಮ್ಮೆ ಡಿಸೆಂಬರ್ ಮಧ್ಯದವರೆಗೆ ವಿಸ್ತರಿಸುತ್ತವೆ. ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರವಾದ ಹವಾಮಾನದಿಂದಾಗಿ ಈ ವರ್ಷ ಡೆಂಗ್ಯೂ ಪ್ರಕರಣಗಳು ವಾಡಿಕೆಗಿಂತ ಮುಂಚಿತವಾಗಿ ದಾಖಲಾಗಿವೆ ಎಂದು ನಾಗರಿಕ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ, ರಾಷ್ಟ್ರ ರಾಜಧಾನಿಯಲ್ಲಿ 9,613 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!