ರಾಜ್ಯದಲ್ಲಿ ಮತ್ತೆ ಕೇಳಿಸುತ್ತಿದೆ ಡೆಂಗ್ಯೂ ಡಂಗೂರ: ನಾಗರಿಕರೇ ಎಚ್ಚರಾ..ಎಚ್ಚರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಡೆಂಗ್ಯೂ ಡಂಗೂರ ಮತ್ತೆ ಕೇಳಿಸುತ್ತಿದ್ದು, ಕಳೆದ 8 ದಿನದ ಅವಧಿಯಲ್ಲಿ ಬರೋಬ್ಬರಿ 344 ಪ್ರಕರಣಗಳು ಪತ್ತೆಯಾಗಿವೆ. ಜುಲೈ 18 ರಿಂದ ಜುಲೈ 25ರ ಅವಧಿಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಳವಾಗಿರುವುದು ಅಂಕಿಅಂಶಗಳು ಸ್ಪಷ್ಟಪಡಿಸಿವೆ.

ಎಲ್ಲೆಲ್ಲಿ ಎಷ್ಟೆಷ್ಟು ಪ್ರರಣ?

ಆರೋಗ್ಯ ಇಲಾಖೆ ಮಾಹಿತಿಯಂತೆ ರಾಜ್ಯದ ಜಿಲ್ಲೆಗಳಾದ ದಕ್ಷಿಣ ಕನ್ನಡದಲ್ಲಿ 13, ಉಡುಪಿಯಲ್ಲಿ 13, ಶಿವಮೊಗ್ಗದಲ್ಲಿ 14, ಬೆಂಗಳೂರಿನಲ್ಲಿ 138 ಪ್ರಕರಣಗಳು ವರದಿಯಾಗಿವೆ

ರಾಜ್ಯದಲ್ಲಿ ಜನವರಿಯಿಂದ ಇದುವರೆಗೆ ಪತ್ತೆಯಾದ ಪ್ರಕರಣಗಳ ಸಂಖ್ಯೆ 3,728. ಕಾಯಿಲೆ ಕುರಿತು ನಾಗರಿಕರು ಎಚ್ಚರಿಕೆಯಿಂದಿರಲು ಆರೋಗ್ಯ ಇಲಾಖೆ ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!