Thursday, August 11, 2022

Latest Posts

ದೆಹಲಿಯಲ್ಲಿ ಹೆಚ್ಚುತ್ತಿದೆ ಡೆಂಘೀ ಜ್ವರ: ನಾಲ್ಕು ವರ್ಷದಲ್ಲಿ ಅತಿ ಹೆಚ್ಚು ಪ್ರಕರಣ ಪತ್ತೆ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಸೋಂಕಿನ ನಡುವೆ ರಾಷ್ಟ್ರ ರಾಜಧಾನಿ ದೆಹಲಿಗೆ ಡೆಂಘೀ ಕಂಟಕ ಎದುರಾಗಿದೆ. ಅಕ್ಟೋಬರ್‌ ಒಂದೇ ತಿಂಗಳಿನಲ್ಲಿ ಬರೋಬ್ಬರಿ 1200 ಮಂದಿಗೆ ಡೆಂಘೀ ಜ್ವರ ಕಾಣಿಸಿಕೊಂಡಿದೆ.

ಒಟ್ಟು ಈ ವರ್ಷ ದೆಹಲಿಯಲ್ಲಿ 1530 ಮಂದಿ ಡೆಂಘೀ ಪೀಡಿತರಾಗಿದ್ದಾರೆ. ಅದರಲ್ಲೂ ಕಳೆದ ನಾಲ್ಕು ವರ್ಷಗಳಲ್ಲಿ ಇಷ್ಟು ಸಂಖ್ಯೆಯಲ್ಲಿ ಡೆಂಘೀ ಪ್ರಕರಣ ಪತ್ತೆಯಾಗಿರುವುದು ಇದೇ ಮೊದಲ ಬಾರಿಗೆ ಎಂದು ಹೇಳಲಾಗುತ್ತಿದೆ.

2017ರ ಅಕ್ಟೋಬರ್ ನಲ್ಲಿ ದೆಹಲಿಯಲ್ಲಿ 2022 ಡೆಂಘೀ ಪ್ರಕರಣ ದಾಖಲಾಗಿತ್ತು. ಅದಾದ ಮೇಲೆ ಇದೇ ಮೊದಲ ಬಾರಿಗೆ 1200 ಜನರಲ್ಲಿ ಡೆಂಘೀ ಜ್ವರ ಕಾಣಿಸಿಕೊಂಡಿದೆ. ಹಾಗೆಯೇ 2017ರ ನಂತರ ಈ ವರ್ಷವೇ ಡೆಂಘೀ ಜ್ವರದಿಂದ ಮೃತಪಟ್ಟವರ ಸಂಖ್ಯೆ ಕೂಡ ಹೆಚ್ಚಳವಾಗಿದ್ದು.

ಸೋಮವಾರ ಡೆಂಗ್ಯೂದಿಂದ ಐದು ಮಂದಿ ಮೃತಪಟ್ಟಿದ್ದಾರೆ. ಅಲ್ಲಿಗೆ ಡೆಂಘೀ ದಿಂದ ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿದ್ದು, ಇದೂ ಕೂಡ 2017ರಿಂದ ಈಚೆಗೆ ಅತಿಹೆಚ್ಚಿನ ಸಂಖ್ಯೆಯ ಡೆಂಘೀ ಸಾವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss