Sunday, August 14, 2022

Latest Posts

ಡೆಂಘೀ ಭೀತಿ: ಸೊಳ್ಳೆಗಳ ಶಮನಕ್ಕೆ ನೀರಿಗಿಳಿಯಲಿವೆ ‘ಮಸ್ಕಿಟೋ ಫಿಶ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದಲ್ಲಿ ಡೆಂಘೀ ಹಾವಳಿ ಹೆಚ್ಚಾಗುತ್ತಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಪುದುಚೆರಿ ಸರ್ಕಾರ ಮುಂದಾಗಿದೆ.
ಇದಕ್ಕಾಗಿ ಮಾಸ್ಟರ್ ಪ್ಲಾನ್ ತಯಾರಾಗಿದ್ದು, ಸೊಳ್ಳೆಗಳ ನಿಯಂತ್ರಣಕ್ಕೆ ಮಸ್ಟಿಟೋ ಫಿಶ್‌ಗಳನ್ನು ಬಳಸಲಾಗುತ್ತಿದೆ. ಡೆಂಗ್ಯೂ ನಿಯಂತ್ರಣಕ್ಕಾಗಿ ಪುದುಚೆರಿಯಲ್ಲಿ ನೀರಿನ ಮೂಲಗಳು ಹಾಗೂ ಬಾವಿಗಳಲ್ಲಿ ಮಸ್ಕಿಟೋ ಫಿಶ್ ಬಿಡಲಾಗುತ್ತಿದೆ.
ಕರೈಜಲ್ ಜಿಲ್ಲೆಯಾದ್ಯಂತ ಸುಮಾರು ನಾಲ್ಕು ಸಾವಿರ ಗ್ಯಾಂಬೂಸಿಯಾ ಮೀನುಗಳನ್ನು ಬಿಡಲಾಗುವುದು. ಜಿಲ್ಲೆಯ ಜಲಮೂಲಗಳಿಗೆ ಇವನ್ನು ಬಿಡಲಾಗುತ್ತದೆ. ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸಲು ಇದರಿಂದ ಸಹಾಯವಾಗುತ್ತದೆ ಎಂದು ಕರೈಕಲ್‌ನ ಆರೋಗ್ಯ ಸೇವೆಗಳ ಉಪನಿರ್ದೇಶಕ ಆರ್.ಶಿವರಾಜ್‌ಕುಮಾರ್ ಹೇಳಿದ್ದಾರೆ.
ಗ್ಯಾಂಬೋಸಿಯಾ ಮೀನುಗಳು ಸಿಹಿನೀರಿನಲ್ಲಿ ಇರುತ್ತವೆ. ಇವನ್ನು ಮನುಷ್ಯರು ಸೇವಿಸುವುದಿಲ್ಲ. ಆಕ್ರಮಣಾಕಾರಿ ಪ್ರಬೇಧಗಳಿಗಿಂತ ಹೆಚ್ಚಿನ ವೇಗದಲ್ಲಿ ಇವು ಸಂತಾನೋತ್ಪತಿ ಮಾಡಬಲ್ಲವು. ಸೊಳ್ಳೆಗಳ ಲಾರ್ವ ಇದಕ್ಕೆ ಆಹಾರ. ಈ ಮೀನು ಮನುಷ್ಯರಿಗೆ ಹಾನಿಕಾರಕವಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss