spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್ ಅವರಿಗೆ ಡೆಂಗ್ಯೂ: ಏಮ್ಸ್ ಮಾಹಿತಿ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅನಾರೋಗ್ಯದಿಂದ ದೆಹಲಿಯ ಏಮ್ಸ್​ (AIIMS)ಗೆ ದಾಖಲಾಗಿರುವ ಮಾಜಿ ಪ್ರಧಾನಮಂತ್ರಿ ಮನಮೋಹನ್​ ಸಿಂಗ್ ಅವರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದ್ದು, ಆದರೆ ಯಾವುದೇ ಅಪಾಯವಿಲ್ಲ, ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ ಎಂದು ಇಂದು ಏಮ್ಸ್​ ವೈದ್ಯರು ತಿಳಿಸಿದ್ದಾರೆ.
ಮನಮೋಹನ್​ ಸಿಂಗ್​ ಅವರಲ್ಲಿ ಪ್ಲೇಟ್​ಲೆಟ್​ ಪ್ರಮಾಣ ಕುಸಿದಿತ್ತು. ಇದೀಗ ಅದರಲ್ಲಿ ಏರಿಕೆಯಾಗುತ್ತಿದೆ ಎಂದೂ ಮಾಹಿತಿ ನೀಡಿದ್ದಾರೆ.
ಮನಮೋಹನ್​ ಸಿಂಗ್​ ಅವರಲ್ಲಿ ಬುಧವಾರ ರಾತ್ರಿ ಜ್ವರ, ಸುಸ್ತು ಕಾಣಿಸಿಕೊಂಡಿತ್ತು. ಅದಾದ ನಂತರ ಅವರನ್ನು ಏಮ್ಸ್​​ನ​​ ಕಾರ್ಡಿಯೋ-ನ್ಯೂರೋ ಸೆಂಟರ್​​ನಲ್ಲಿರುವ ಖಾಸಗಿ ವಾರ್ಡ್​​​ಗೆ ದಾಖಲಿಸಲಾಗಿತ್ತು.ಹೃದ್ರೋಗ ತಜ್ಞರು ನಿಗಾವಹಿಸಿದ್ದರು. ಇದೀಗ ಅವರಲ್ಲಿ ಡೆಂಗ್ಯೂ ಇರುವುದು ಗೊತ್ತಾಗಿದ್ದು, ವೈದ್ಯ ನಿತೀಶ್​ ನಾಯಕ್​ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮನಮೋಹನ್​ ಸಿಂಗ್​ ಶೀಘ್ರವೇ ಗುಣಮುಖರಾಗಲಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾರೈಸಿದ್ದಾರೆ. ಕೇಂದ್ರ ಆರೋಗ್ಯ ಸಚಿವ ಮನ್​ಸುಖ್​ ಮಾಂಡವಿಯಾ ಏಮ್ಸ್​ಗೆ ಭೇಟಿ ನೀಡಿ, ಅವರ ಆರೋಗ್ಯದ ಬಗ್ಗೆ ವರದಿ ಪಡೆದಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss