ಬ್ರಾಹ್ಮಣ ಸಮುದಾಯದ ಅವಹೇಳನ: ಸಿದ್ದರಾಮಯ್ಯರ ಆಪ್ತರ ವಿರುದ್ಧ ದೂರು ದಾಖಲು

ಹೊಸದಿಗಂತ ವರದಿ, ಮೈಸೂರು:

ಬ್ರಾಹ್ಮಣ ಸಮುದಾಯವನ್ನು ಅವಹೇಳನ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ರ ಆಪ್ತರಾದ ಚಿಂತಕ ಪ.ಮಲ್ಲೇಶ್ ವಿರುದ್ಧ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ದೂರು ದಾಖಲಿಸಲಾಯಿತು.

ಬ್ರಾಹ್ಮಣಿಕ ಬಗ್ಗೆ ಸಾರ್ವಜನಿಕವಾಗಿ ಆಕ್ಷೇಪ ಮತ್ತು ಅಶ್ಲೀಲವಾಗಿ ಮಾತನಾಡಿ, ವೇದ ಹಾಗೂ ಉಪನಿಷತ್ತುಗಳ ಬಗ್ಗೆ ಕೆಟ್ಟ ಅಭಿರುಚಿಯಿಂದ ಲಘುವಾಗಿ ಮಾತನಾಡಿ, ಮಠಾಧೀಶರನ್ನು ಕೂಡ ಅವಹೇಳನ ಮಾಡಿರುವ ಪ. ಮಲ್ಲೇಶ್ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಬ್ರಾಹ್ಮಣ ಸಂಘಟನೆಗಳ ಒಕ್ಕೂಟದಿಂದ ದೂರು ದಾಖಲಿಸಲಾಯಿತು.
ದೂರಿನಲ್ಲಿ ಅವಹೇಳನ ವಿಷಯಗಳ ಜೊತೆ, ಜಾತಿ ನಿಂದನೆ ಸೇರಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿರುವ ವಿಚಾರವನ್ನು ಸೇರಿಸಿ 153A, 295, 295A ಕಲಂನಡಿ ದೂರು ದಾಖಲಿಸಲು ಕೋರಲಾಗಿದೆ.
ದೂರು ಸಲ್ಲಿಕೆ ವೇಳೆ ಧಾರ್ಮಿಕ ಮುಖಂಡರಾದ ಡಾ. ಭಾನುಪ್ರಕಾಶ್ ಶರ್ಮ, ಬಿಜೆಪಿ ನಗರಾಧ್ಯಕ್ಷ ಟಿ ಎಸ್ ಶ್ರೀವತ್ಸ, ವಿಪ್ರ ಮುಖಂಡರಾದ ಎಚ್. ವಿ ರಾಜೀವ್, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ ಟಿ ಪ್ರಕಾಶ್, ಆದರ್ಶ ಸಂಘದ ಅಧ್ಯಕ್ಷರಾದ ಜಿ ಆರ್ ನಾಗರಾಜ್, ವಿಪ್ರ ಪ್ರೊಫೆಷನಲ್ ಫೋರಂ ಅಧ್ಯಕ್ಷರಾದ ಎಸ್.ಭಾಷ್ಯಂ, ಸುಧೀಂದ್ರ, ಕೆ ಆರ್ ಸತ್ಯನಾರಾಯಣ್, ರಾಕೇಶ್ ಭಟ್, ಎಚ್‍ ಜಿ ಗಿರಿಧರ್ ಜಯಸಿಂಹ ಇನ್ನೂರುಕ್ಕು ಹೆಚ್ಚು ವಿಪ್ರ ಮುಖಂಡರು ಹಾಜರಿದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!