Saturday, June 25, 2022

Latest Posts

ಹೆಜ್ಜೇನು ನೊಣಗಳ ದಾಳಿಗೆ ಸಿಲುಕಿದ್ದ ಅಬಕಾರಿ ಇಲಾಖೆ ಸಿಬ್ಬಂದಿ ಸಾವು

ದಿಗಂತ ವರದಿ ಅಂಕೋಲಾ:

ಹೆಜ್ಜೇನು ನೊಣಗಳ ದಾಳಿಗೆ ಸಿಲುಕಿ ತೀವ್ರವಾಗಿ ಅಸ್ವಸ್ಥಗೊಂಡ ಅಬಕಾರಿ ಇಲಾಖೆ ಸಿಬ್ಬಂದಿಯೋರ್ವರು ಮೃತ ಪಟ್ಟ ಘಟನೆ ತಾಲೂಕಿನ ಅಜ್ಜಿಕಟ್ಟಾ ಬಳಿ ನಡೆದಿದೆ.
ಯಲ್ಲಾಪುರ ನಿವಾಸಿ ಅಂಕೋಲಾ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಸನ್ ಖಾನ್ ಕರೀಂ ಖಾನ್ (45) ಮೃತ ದುರ್ದೈವಿಯಾಗಿದ್ದು ಬುಧವಾರ ಮದ್ಯಾಹ್ನ ಉಪಹಾರ ತರಲು ಹೋಗಿದ್ದ ಅವರ ಮೇಲೆ ಭಾರಿ ಪ್ರಮಾಣದಲ್ಲಿ ಹೆಜ್ಜೇನು ದಾಳಿ ಮಾಡಿದ್ದರಿಂದ ಅಸ್ವಸ್ಥಗೊಂಡ ಅವರನ್ನು ಕಾರವಾರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಿಗ್ಗಿನ ಜಾವ ಅವರು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.
ಇತ್ತೀಚಿನ ದಿನಗಳಲ್ಲಿ ಅಂಕೋಲಾ ಪಟ್ಟಣದ ವಿವಿಧ ಭಾಗಗಳಲ್ಲಿ ಹೆಜ್ಜೇನು ನೊಣಗಳ ದಾಳಿ ಘಟನೆ ಹೆಚ್ಚುತ್ತಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss